ಕ್ರಿಕೆಟ್ ಲೋಕದ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಅವರು ಈಗ ಸುದ್ದಿಯಾಗಿರುವುದು ಪುತ್ರಿ ಸಾರಾರ ವಿಷಯಕ್ಕಾಗಿ.
ಸಚಿನ್ ರ ಪುತ್ರಿ ಸಾರಾ ತಾಯಿಯಂತೆಯೇ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿದ್ದು, ಈಗ ನಟನಾ ಲೋಕದತ್ತ ಗಮನ ಹರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಜೀವನ ಚರಿತ್ರೆ ಆಧಾರಿತ ದಿ ಮಿಲೇನರ್ ಚಿತ್ರ ಬಿಡುಗಡೆಗೊಂಡ ಸಂದರ್ಭದಲ್ಲೇ ಸಾರಾಗೆ ಬಾಲಿವುಡ್ ನಿಂದ ಬುಲಾವ್ ಬಂದಿತ್ತಾದರೂ ಅವರ ತಾಯಿ ಅಂಜಲಿ ಪುತ್ರಿಯನ್ನು ನಟಿಯಾಗಿಸಲು ಒಪ್ಪಿರಲಿಲ್ಲ.
ಆದರೆ ಈಗ ಅಂಜಲಿಯೇ ಸಾರಾಗೆ ನಟನೆಯ ತರಬೇತಿಯನ್ನು ಕೊಡಿಸಲು ಮುಂದಾಗಿದ್ದು , ಮಗಳನ್ನು ನಟನೆಯ ಲೋಕಕ್ಕೆ ಕರೆ ತರಲು ಸಜ್ಜಾಗಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿ ಇರುವ ಸಾರಾ ತೆಂಡೂಲ್ಕರ್‍ಗೆ ಇನ್ ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್ಸ್ ಇದ್ದು, ಇನ್ನು ಅವರು ಬಾಲಿವುಡ್ ಲೋಕಕ್ಕೆ ಬಂದರೆ ಅದರ ಸಂಖ್ಯೆಯೂ ಹೆಚ್ಚಾಗಲಿದೆ. ಸಚಿನ್ ಪುತ್ರ ಅರ್ಜುನ್ ತಂದೆಯಂತೆಯೇ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5