ತಿಪಟೂರು: ನಗರದಲ್ಲಿನ ಕೋಡಿ ಸರ್ಕಲ್ ಹತ್ತಿರ ಬರುವ ನಕ್ಷತ್ರ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರಾದ ರಮೇಶ್ ಶಿವಪುರ ಇವರ ಮೇಲೆ ನಗರ ಪೊಲೀಸ್ ಠಾಣಾ ಪೇದೆ ಕೃಷ್ಣಮೂರ್ತಿ ಎಂಬವರು ಹಲ್ಲೆ ನಡೆಸಿ, ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳು, ತಾಲೂಕಿನ ಆದಿಜಾಂಬವ ಸಂಘದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸೆಪ್ಟಂಬರ್ ನಲ್ಲಿ ಈ ಘಟನೆ ನಡೆದಿದ್ದು, ಸಂಜೆ 5:30ರಿಂದ 6 ಗಂಟೆಯ ವೇಳೆ ಕೃಷ್ಣಪ್ಪನವರು ಕಂಠಪೂರ್ತಿಯಾಗಿ ಕುಡಿದು ಬಿಲ್ ಕೊಡದೇ ಹೋಗಿದ್ದು, ಬಿಲ್ ಕೇಳಿದ ಸಂದರ್ಭ ಬಾರ್ ನ ವ್ಯವಸ್ಥಾಪಕ ರಮೇಶ್ ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಆರೋಪಿಸಿದರು.
ಪೇದೆ ಕೃಷ್ಣಮೂರ್ತಿ ಅವರು, ಹಲ್ಲೆ ನಡೆಸಿರುವುದೇ ಅಲ್ಲದೇ ಮಾಮೂಲಿ ವಸೂಲಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತಿಪಟೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ರೀತಿಯ ಕ್ರಮ ಜರುಗಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಆರೋಪಿಸಿದರು.
ಈ ಸಂದರ್ಭದಲ್ಲಿ ಆದಿಜಾಂಬವ ಅಧ್ಯಕ್ಷ ಪೆದ್ದಿಹಳ್ಳಿ ನರಸಿಂಹಯ್ಯ, ಗಾಂಧಿನಗರ ಬಸವರಾಜ್ ತಾತಯ್ಯ ಸೇರಿದಂತೆ ದಲಿತ ಮುಖಂಡರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700