ನಾವು ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸಬೇಕು,ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ. ವೈವಿಧ್ಯತೆಯಲ್ಲಿ ಏಕತೆ ಭಾರತದ ಪುರಾತನ ವೈಶಿಷ್ಟ್ಯ. ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ. ಅವರ ಆಚರಣೆಗಳನ್ನು ಯಾರೂ ಬದಲಾಯಿಸುವ ಅಗತ್ಯವಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪುನರುಚ್ಛರಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ಮಾತನಾಡಿದ ಅವರು, ಎಲ್ಲರನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗುವುದನ್ನು ನಂಬುವ ವಿಶ್ವದ ಏಕೈಕ ಕಲ್ಪನೆ ಹಿಂದುತ್ವ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು ಎಂದು ನಾವು 1925ರಿಂದಲೂ ಹೇಳುತ್ತಿದ್ದೇವೆ. ಭಾರತವನ್ನು ಮಾತೃಭೂಮಿ ಎಂದು ಪರಿಗಣಿಸುವವರು ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯೊಂದಿಗೆ ಬದುಕಲು ಬಯಸುತ್ತಾರೆ. ಅವರು ಯಾವುದೇ ಧರ್ಮ, ಸಂಸ್ಕೃತಿ, ಭಾಷೆ ಮತ್ತು ಆಹಾರ ಪದ್ಧತಿ ಮತ್ತು ಸಿದ್ಧಾಂತವನ್ನು ಅನುಸರಿಸಿದರೂ ಅವರು ಹಿಂದೂಗಳೇ ಆಗಿರುತ್ತಾರೆ ಎಂದು ಹೇಳಿದ್ದಾರೆ.
ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ. ವೈವಿಧ್ಯತೆಗಳ ಜೊತೆಯಲ್ಲೇ ನಾವೆಲ್ಲರೂ ಒಟ್ಟಿಗೇ ಇದ್ದೇವೆ. ಪ್ರತಿಯೊಬ್ಬರೂ ತಮ್ಮ ನಮ್ಮ ಪೂರ್ವಜರು ನಂಬಿಕೆ ಮತ್ತು ಆಚರಣೆಗಳಿಗೆ ಅಂಟಿಕೊಳ್ಳಬೇಕು, ಇತರರ ನಂಬಿಕೆಯನ್ನು ಪರಿವರ್ತಿಸಲು ಪ್ರಯತ್ನಿಸಬಾರದು ಎಂದು ಕಲಿಸಿದರು. ಅದರಂತೆ ನಾವು ಬಾಳಬೇಕಾಗಿದೆ. ಪ್ರತಿಯೊಬ್ಬರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಿ. ಎಲ್ಲರನ್ನೂ ಸ್ವೀಕರಿಸಿ. ಆದರೆ ನಿಮ್ಮದೇ ದಾರಿಯಲ್ಲಿ ನಡೆಯಿರಿ ಎಂದು ಭಾಗವತ್ ಸಲಹೆ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy