ಸರಗೂರು: ಜಗತ್ತಿನಲ್ಲಿಯೇ ಭಾರತಕ್ಕೆ ದೊಡ್ಡ ಸಂವಿಧಾನ ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ವ್ಯಕ್ತಿಯಲ್ಲ. ಅವರೊಂದು ದೊಡ್ಡ ಶಕ್ತಿ ಎಂದು ಮಾಜಿ ಸಚಿವರು ಎಚ್.ಸಿ.ಮಹಾದೇವಪ್ಪ ಹೇಳಿದರು.
ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ ಅವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ದೇವರಂತೆ ಕಂಡು ದಿನನಿತ್ಯ ಪೂಜಿಸುವಂತೆ ಅವರು ಎಲ್ಲಾ ಸಮುದಾಯಕ್ಕೆ ಕರೆ ನೀಡಿದರು.
ಭಾರತವು ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಅಂಬೇಡ್ಕರ ಅವರು ಕಾರಣರು. ಇಡೀ ವಿಶ್ವವೇ ಬೆರಗಾಗುವಂತಹ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು. ಅವರ ಪರಿಕಲ್ಪನೆಯಿಂದಾಗಿ ನಾವಿಂದು ಅಧಿಕಾರ ಅನುಭವಿಸುತ್ತಿದ್ದೇವೆ. ಶೋಷಿತ ವರ್ಗದವರ ಧ್ವನಿಯಾಗಿದ್ದ ಅಂಬೇಡ್ಕರ ಭಾರತದ ಅಮೂಲ್ಯ ಆಸ್ತಿ ಎಂದು ಬಣ್ಣಿಸಿದರು.
ಮಾಜಿ ಸಂಸದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದಿಂದ ವಿಶ್ವಕ್ಕೇ ಮಾದರಿಯಾದ ಬೃಹತ್ ಲಿಖಿತ ಸಂವಿಧಾನ ಜಾರಿಯಾಗಿದೆ. ಇದರಿಂದ ಎಲ್ಲಾ ಸಮುದಾಯಗಳಿಗೆ ಶಿಕ್ಷಣ, ಸಮಾನತೆ, ಲಭಿಸಿದೆ ಎಂದು ಸಂದೇಶ ನೀಡಿದರು.
ಸಂವಿಧಾನ ರಚಿಸಲು ಬಾಬಾ ಸಾಹೇಬರ ನೇತೃತ್ವದಲ್ಲಿ 389 ಜನರನ್ನೊಳಗೊಂಡ ಸಮಿತಿ ರಚನೆಯಾಗಿತ್ತು. ಅವರಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರು ನಿರಂತರ ಓದುಗರಾಗಿ 50 ಸಾವಿರ ಪುಸ್ತಕ ಓದಿದ ಇತಿಹಾಸವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಅಂಬೇಡ್ಕರ್ ಹೇಳಿದಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಅವರು ತಿಳಿಸಿದರು.
ಸಾಗರೆ ಗ್ರಾಮದ ಅಭಿವೃದ್ಧಿಗೆ ವರ್ಷಗಳಿಂದ ಸರ್ಕಾರದ 10.50 ಲಕ್ಷ ರೂಪಾಯಿಗಳನ್ನು ವಿವಿಧ ಯೋಜನೆಯಡಿ ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಮ್ಮ ತಂದೆ ಮೊದಲಿನಿಂದಲೂ ಸಾಗರೆ ಗ್ರಾಮಸ್ಥರ ಉಪಕಾರ ನಮ್ಮ ಕುಟುಂಬದ ಮೇಲಿದೆ ಎಂದರು.
ಬಿಜೆಪಿ ಮುಖಂಡ ಎಂ.ಅಪ್ಪಣ್ಣ, ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್, ಮಾತನಾಡಿದ್ದರು. ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಪೂಜ್ಯ ಮಾತೇ ಗೌತಮಿ ಭಂತೇಜಿ, ಸಾಮಾಜ ಸೇವಕರು ಕೃಷ್ಣಸ್ವಾಮಿ, ದೇವದತ್ತ, ಶಂಕರೇಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ವೆಂಕಟಸ್ವಾಮಿ,ಚಿಕ್ಕವೀರನಾಯಕ, ಪುರಸಭೆ ಸದಸ್ಯಹೆಚ್ ಸಿ ನರಸಿಂಹಮೂರ್ತಿ, ಅಧಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, , ಮಾಜಿ ತಾ ಪಂ ಅಧ್ಯಕ್ಷ ಗಿರೀಶ್, ಗ್ರಾಪಂ ಅಧ್ಯಕ್ಷ ಮೃತ್ಯುಂಜಯ, ಉಪಾಧ್ಯಕ್ಷೆ ರೂಪಲೋಕೇಶ್, ಗ್ರಾಪಂ ಸದಸ್ಯರು ಎಸ್ ಟಿ ಸೋಮಣ್ಣ, ಮಹದೇವನಾಯಕ, ನಂಜಯ್ಯ,ಚನ್ನಿಪುರಮಲ್ಲೇಶ್, ಯೂತ್ ಕ್ಲಬ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲಶಿವರಾಜು, ಮಾಜಿ ತಾ ಪಂ ಅಧ್ಯಕ್ಷ ಮತ್ತು ಜೆಡಿಎಸ್ ತಾ ಅಧ್ಯಕ್ಷ ಗೋಪಾಲಸ್ವಾಮಿ, ಡಿಎಸ್ಎಸ್ ಮುಖಂಡರು ಹೆಗ್ಗನೂರುನಿಂಗರಾಜು,ಇಟ್ನ ರಾಜಣ್ಣ,ಯುವ ಮುಖಂಡ ಹೂವಿನ ಕೊಳ ಮಹೇಂದ್ರ, ಇನ್ನೂ ಮುಖಂಡರು ಹಾಜರಿದ್ದರು ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಮಹಿಳೆಯರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy