ಮಧುಗಿರಿ: ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ವೇಳೆ ಮಹಿಳೆ ಸಹಿತ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ.
ರಾಮಾಂಜನೇಯ. (48) ಶಿಲ್ವಾ (36) ಹತ್ಯೆಗೀಡಾದವರಾಗಿದ್ದು, ಶ್ರೀಧರ್ ಗುಪ್ತ ಮತ್ತು ಸಹಚರರು ಕೃತ್ಯ ನಡೆಸಿದ ಆರೋಪಿಗಳಾಗಿದ್ದಾರೆ. ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದ ತಕರಾರು ಹತ್ಯೆಯಲ್ಲಿ ಅಂತ್ಯಗೊಂಡಿದೆ ಎಂದು ಹೇಳಲಾಗಿದೆ.
ಗಣಪತಿ ದೇವಸ್ಥಾನದ ಜಾಗದ ವಿಚಾರವಾಗಿ ಆರೋಪಿ ಶ್ರೀಧರ್ ಗುಪ್ತ ಹಾಗೂ ಹತ್ಯೆಗೀಡಾದ ರಾಮಾಂಜನೇಯ ಹಾಗೂ ಶಿಲ್ಪಾ ನಡುವೆ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. ಈ ಪ್ರಕರಣದಲ್ಲಿ ರಾಮಾಂಜನೇಯ ಹಾಗೂ ಶಿಲ್ಪಾ ಅವರ ಪರವಾಗಿ ತೀರ್ಪು ಬಂದಿತ್ತು. ಇದೇ ದ್ವೇಷದಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ.
ರಾಮಾಂಜನೇಯ, ಶಿಲ್ಪಾ, ಮತ್ತು ಮಲ್ಲಿಕಾರ್ಜುನ ಎಂಬವರು ರಸ್ತೆಯಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಶ್ರೀಧರ್ ಗುಪ್ತ ಮತ್ತು ಸಹಚರರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಪರಿಣಾಮವಾಗಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ರಾಮಾಂಜನೇಯ, ಶಿಲ್ಪಾ ಮೃತಪಟ್ಟರೆ, ಮಲ್ಲಿಕಾರ್ಜುನ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ M.R.ಸರ್ದಾರ್, ಪಿಎಸ್ ಐ, ತಾರಾ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಧುಗಿರಿ ಶವಗಾರದಲ್ಲಿ ಇರಿಸಲಾಗಿದೆ. ಕೃತ್ಯದ ಬಳಿಕ ಆರೋಪಿ ಶ್ರೀಧರ್ ಗುಪ್ತ ಮತ್ತು ಸಹಚರರು ತಲೆಮರೆಸಿಕೊಂಡಿದ್ದರು. ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಎಸ್ಪಿ ರಾಹುಲ್ ಕುಮಾರ್ ಶಹಪೂರ್ ರ್ವಾಡ್ ಭೇಟಿ:
ಘಟನೆ ಸಂಬಂಧ ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಸಂಜೆ 7:30 ರಲ್ಲಿ ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದು 2 ಕೊಲೆಯಾಗಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾನೆ, ಪ್ರಥಮ ತನಿಖಾ ವರದಿಯ ಪ್ರಕಾರ ಜಾಗದ ವಿಚಾರವಾಗಿ ಗಲಾಟೆ ನಡೆದಿದ್ದು, ಇದು ನ್ಯಾಯಾಲಯದಲ್ಲಿ ಪ್ರಕರಣ ಇತ್ತು ಎನ್ನಲಾಗಿದೆ. ಈಗಾಗಲೇ ಓರ್ವ ಆರೋಪಿ ಶ್ರೀಧರ್ ಗುಪ್ತನನ್ನು ಬಂಧಿಸಲಾಗಿದೆ.
ಒಬ್ಬನಿಂದ ಕೊಲೆ ನಡೆದಿಲ್ಲ ಇನ್ನು ಆರೋಪಿಗಳಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದು ಈ ಬಗ್ಗೆ ಆರೋಪಿಯಿಂದ ಹೆಚ್ಚಿನ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಇಬ್ಬರು ಮೃತಪಟ್ಟಾಗ ಗ್ರಾಮದಲ್ಲಿ ಸಹಜವಾಗಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಆ ರೀತಿ ಆಗವುದು ಬೇಡ ಗ್ರಾಮದಲ್ಲಿ ಪ್ರಚೋದನೆ ಕೊಟ್ಟಿ ಬೇರೆ ಯಾವುದೆ ರೀತಿಯ ಅನಾಹುತಕ್ಕೆ ಅವಕಾಶ ಆಗುವುದು ಬೇಡ, ಆದ್ದರಿಂದ ಎರಡು ಕುಟುಂಬಗಳಿಗೆ ಭೇಟಿ ನೀಡಿದ್ದೇನೆ. ನಮ್ಮ ತನಿಖಾಧಿಕಾರಿಗಳು ಈ ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಮಾಧ್ಯಮ ಮೂಲಕ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಭರವಸೆ ನೀಡಿದರು.
ವರದಿ: ದೊಡ್ಡೇರಿ ಮಹಲಿಂಗಯ್ಯ | ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy