ಬೆಂಗಳೂರು: ಪ್ಲೈವುಡ್ ಅಂಗಡಿ ಅಂಗಡಿಯವರ ಜೊತೆಗೆ ಕುಡಿದು ಬಂದು ಜಗಳ ವಾಡಿದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸುಜಿತ್ (22) ಹತ್ಯೆಯಾದ ಯುವಕನಾಗಿದ್ದಾನೆ. ಈತ ಬಿಹಾರ ಮೂಲದ ಯುವಕ ಎಂದು ತಿಳಿದು ಬಂದಿದೆ.
ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಿಳೇಕಲ್ಲಹಳ್ಳಿಯಲ್ಲಿರುವ ಪ್ಲೈವುಡ್ ಅಂಗಡಿಯಲ್ಲಿ ಸುಜಿತ್ ಈ ಹಿಂದೆ ಕೆಲಸ ಮಾಡುತ್ತಿದ್ದನು. ಕೆಲಸದ ವೇಳೆ ಮದ್ಯಪಾನ ಮಾಡಿ ಬರುತ್ತಿದ್ದರಿಂದ ಮಾಲೀಕರು ಆತನನ್ನು ಕೆಲಸದಿಂದ ತೆಗೆದಿದ್ದರು. ಹಾಗಾಗಿ ಸುಜಿತ್ ಬೇರೆಕಡೆ ಕೆಲಸಮಾಡುತ್ತಿದ್ದ.
ಈ ಪ್ಲೈವುಡ್ ಅಂಗಡಿಯಲ್ಲಿ ನಿನ್ನೆ ನಾಲ್ವರು ಕೆಲಸಗಾರರು ಮರಗೆಲಸ ಮಾಡುತ್ತಿದ್ದರು ರಾತ್ರಿ 8 ಗಂಟೆ ಸುಮಾರಿನಲ್ಲಿ ಇಬ್ಬರು ಕೆಲಸಗಾರರು ಹೊರಗೆ ಹೋಗಿದ್ದರು. ಆ ಸಂದರ್ಭದಲ್ಲಿ ಸುಜಿತ್ ಪ್ಲೈವುಡ್ ಅಂಗಡಿ ಬಳಿ ಕುಡಿದು ಬಂದು ಇಬ್ಬರು ಕೆಲಸಗಾರರ ಜೊತೆ ಜಗಳವಾಡಿದ್ದಾನೆ. ಮಾತಿಗೆಮಾತು ಬೆಳೆದು ವಿಕೋಪಕ್ಕೆ ಹೋದಾಗ ರಿಪೀಸ್ ಪಟ್ಟಿಯಿಂದ ಕೆಲಸಗಾರರು ಸುಜಿತ್ ತಲೆಗೆ ಹೊಡೆದು, ಕುತ್ತಿಗೆ ಹಿಸುಕಿದಾಗ ಉಸಿರುಗಟ್ಟಿ ಸುಜಿತ್ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಯಾದ ಇಬ್ಬರು ಕೆಲಸಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದೇ ವೇಳೆ ಇನ್ನಿಬ್ಬರು ಕೆಲಸಗಾರರ ಅಂಗಡಿಗೆ ಆಗಮಿಸಿದ ವೇಳೆ ಕೊಲೆ ನಡೆದಿರುವುದು ತಿಳಿದು ಬಂದಿದ್ದು, ಮಾಲಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296