ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್‌ನಲ್ಲಿರುವ ಪಿಜಿಯೊಂದರಲ್ಲಿ ಯುವತಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲಕ ಕೃತಿ ಕುಮಾರಿ ಎಂಬ 24 ವರ್ಷದ ಯುವತಿಯೇ ಕೊಲೆಯಾದವಳು. ಕಳೆದ ರಾತ್ರಿ 11.10 ರಿಂದ 11.30ರ ಸಂದರ್ಭದಲ್ಲಿ ಯುವಕನೋರ್ವ ಲೇಡಿಸ್ ಪಿಜಿಗೆ ನುಗ್ಗಿದ್ದಾನೆ. ಪಿಜಿಯ ಮೂರನೇ ಮಹಡಿಯಲ್ಲಿದ್ದ ಯುವತಿ ಕೃತಿ ಕುಮಾರಿ ಕೊಠಡಿಗೆ ನುಗ್ಗಿರುವ ಯುವಕ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆ ಯುವಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಕೃತಿ ಕುಮಾರಿಗೆ ಪರಿಚಯವಿರುವ ಯುವಕನೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಪಿಜಿ ಮಾಲೀಕನ ನಿರ್ಲಕ್ಷ್ಯದಿಂದ ಆ ಯುವಕ ಪಿಜಿಗೆ ನುಗ್ಗಿದ್ದು, ಯುವತಿಯ ಕೊಲೆಗೆ ಕಾರಣವಾಗಿದೆ.
ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಪಿಜಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ಫುಟೇಜ್‌ಗಳನ್ನು ಪಡೆದಿರುವ ಪೊಲೀಸರು, ಅದರ ಆಧಾರದ ಮೇಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


