ಸರಗೂರು: 12ನೇ ಶತಮಾನದಲ್ಲಿಯೇ ಶರಣ ಹಡಪದ ಅಪ್ಪಣ್ಣನವರಿಗೆ ನಿಜಸುಖಿ ಎಂದು ಬಸವಣ್ಣನವರು ಕರೆಯುತ್ತಿದ್ದರು. ಅಪ್ಪಣ್ಣನವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಲಿಂಗವನ್ನು ನೋಡಿ, ಅದರಲ್ಲಿಯೇ ತಲ್ಲೀನರಾಗಿರುತ್ತಿದ್ದರು ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರದಂದು ಹಡಪದ ಅಪ್ಪಣ್ಣ ಜಯಂತಿಯನ್ನು ಹಮ್ಮಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಪೋಟೋ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಡೋಹರ ಡಕ್ಕಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೋಳಿಗೆಯ ಮಾರಯ್ಯ, ಮೇಧಾರ ಕೇತಯ್ಯ, ಸಮಗಾರ ಹರಳಯ್ಯ, ಸೊನ್ನಲಗದ ಸಿದ್ದರಾಮ ಸೇರಿದಂತೆ ಜಗತ್ತಿನ ಎಲ್ಲ ಧರ್ಮದ ಶರಣರಿಗೆ ಬಸವಣ್ಣನವರು 12ನೇ ಶತಮಾನದ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು ಎಂದರು.
ಸವಿತಾ ಸಮಾಜ ತಾಲೂಕು ಅಧ್ಯಕ್ಷ ನರಸಿಂಹ ಮಾತನಾಡಿ, ತಾಲ್ಲೂಕು ಅಧಿಕಾರಿಗಳು ಹಾಗೂ ಶಾಸಕರು ನಮ್ಮ ಸಮಾಜವನ್ನು ಕಡೆಗಣಿಸುತ್ತಿದ್ದಾರೆ . ಐದು ಅವಧಿಯಲ್ಲಿ ಐದು ಶಾಸಕರನ್ನು ನೋಡಿಕೊಂಡು ಬರುತ್ತಿದ್ದೇವೆ. ಆದರೆ ಸಮಾಜಕ್ಕೆ ಸಮುದಾಯದ ಭವನಕ್ಕೆ ಜಾಗವನ್ನು ನೀಡಲು ನಿರಾಕರಿಸುತ್ತಿದ್ದಾರೆಂದು ದೂರಿದರು.
ನಮ್ಮ ಸಮುದಾಯದ ಚಿಕ್ಕದು ಎಂದುಕೊಂಡು ಎಷ್ಟೋ ಬಾರಿ ಶಾಸಕರಿಗೆ ಹಾಗೂ ಕಂದಾಯ ಹಾಗೂ ಪ.ಪಂ. ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ, ಯಾವುದೇ ಪ್ರಯೋಜನವಾಗಿಲ್ಲ.ಬೇರೆ ಬೇರೆ ಸಮಾಜದವರು ಹೆಚ್ಚಾಗಿ ಇದ್ದಾರೆ ಎಂದು ಅವರಿಗೆ ಜಾಗವನ್ನು ನೀಡುತ್ತಾರೆ. ನಮ್ಮ ಸಮಾಜ ಕಡಿಮೆ ಜನಸಂಖ್ಯೆಯಲ್ಲಿ ಇದ್ದೇವೆ ಎಂದು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಡಪದ ಅಪ್ಪಣ್ಣನವರು ವಚನದಲ್ಲಿ ಲಾಲಿತ್ಯ ಗುರು ಲಿಂಗ ಜಂಗಮ ನಿಷ್ಠೆ ಇತ್ತು. ಹೀಗಾಗಿ ಹಡಪದ ಸಮಾಜ ಬಾಂಧವರೆಲ್ಲರೂ ಅಪ್ಪಣ್ಣರವರ ವಚನಗಳ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಂಡು ನಿತ್ಯವೂ ಅವರ ವಚನಗಳನ್ನು ಮಕ್ಕಳಿಗೆ ಹಾಗೂ ಕುಟುಂಬದ ಎಲ್ಲರೂ ಓದಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಾಲಪ್ಪ ಮಾತನಾಡಿ, ಈ ಸಮಾಜದಲ್ಲಿ ಬೆಳಗ್ಗೆ ಎದ್ದ ತಕ್ಷ ಣವೇ ಹಡಪದ ಅವರ ಮುಖ ನೋಡಬಾರದು ಎಂಬ ತಪ್ಪು ಕಲ್ಪನೆ ದೂರ ಮಾಡಲು ಅಣ್ಣ ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ತಮ್ಮನ್ನು ನೋಡಲು ಬರುವವರೆಲ್ಲರೂ ಮೊದಲು ಅಪ್ಪಣ್ಣನವರನ್ನು ಭೇಟಿ ಮಾಡಿ ಬರುವಂತೆ ಮಾಡಿದ್ದರು ಎಂದರು.
ಗ್ರೇಟ್ 2 ತಹಸಿಲ್ದಾರ್ ಪರಶಿವಮೂರ್ತಿ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಮಾತನಾಡಿದರು. ಇದೇ ವೇಳೆ ಸಮಾಜ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು. ನಿರೂಪಣೆ ಲಯನ್ಸ್ ಅಕಾಡೆಮಿ ಶಾಲೆಯ ಶಿಕ್ಷಕ ಸುನೀಲ್ ಹೂವಿನಕೊಳ ಮಾಡಿಕೊಂಡರು.
ಈ ಸಂದರ್ಭದಲ್ಲಿಸಮಾಜದ ಪಪಂ ಸದಸ್ಯರು ಚೆಲುವ ಕೃಷ್ಣ, ನೂರಳಾಸ್ವಾಮಿ, ಉಮಾ ರಾಮಚಂದ್ರ, ಚೈತ್ರ ಸ್ವಾಮಿ, ಟೌನ್ ಅಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷರು ರವಿ,ರಾಜು, ಮುಳ್ಳೂರು ರವಿ, ಪ್ರದಾನ ಕಾರ್ಯದರ್ಶಿ ಪ್ರಭಾಕರ, ಖಜಾಂಚಿ ಕಾಳಶಟ್ಟಿ, ಯಜಮಾನರು ಮುರಾರಿ, ಚಂದ್ರಶೇಖರ, ವೃಕ್ಷ ಕಮಿಟಿ ಸದಸ್ಯ ಸುಭಾನ್, ರಂಗಪ್ಪ, ರಂಗಶಟ್ಟಿ ಗೋವಿಂದರಾಜ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


