ತೆಲಂಗಾಣ ಮೂಲದ ಖಾಸಗಿ ಕಂಪನಿಯ ಎಲೆಕ್ನಿಕ್ ಸ್ಕೂಟರ್ ಗಳಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಸರಿಪಡಿಸುವಂತೆ ಷೋ ರೂಮ್ ಗೆ ನೀಡಿ ಮೂರು ತಿಂಗಳಾದರೂ ಸಮಸ್ಯೆ ಬಗಹರಿಸುತ್ತಿಲ್ಲ ಎಂದು ಆರೋಪಿಸಿ ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಗ್ರಾಹಕರು ದೂರು ನೀಡಿದ್ದಾರೆ.
ಖಾಸಗಿ ಕಂಪನಿ ಬೆಂಗಳೂರಿನ ಜಯನಗರದಲ್ಲಿ ಷೋ ರೂಮ್ ಓಪನ್ ಮಾಡಿದೆ. ಸ್ಕೂಟರ್ ಮಾರಾಟ ಮಾಡಲು ಖಾಸಗಿ ವ್ಯಕ್ತಿಗಳಿಗೆ ಡೀಲರ್ ಶಿಪ್ ಕೂಡ ನೀಡಿದ್ದರು.


