ಬೆಂಗಳೂರು: ಪೌರ ಕಾರ್ಮಿಕರಿಗೆ ನೆರವಾಗುವುದಕ್ಕಾಗಿ ಬಿಬಿಎಂಪಿ ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್ ಗಳನ್ನು ಅಥವಾ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಈ ಯಂತ್ರಗಳನ್ನು ಖರೀದಿಸಲಾಗುತ್ತದೆ.
ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್ ಗಳನ್ನು ಖರೀದಿಸಲು ಈ ಹಿಂದೆಯೂ ಎರಡು ಬಾರಿ ಯತ್ನಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ವಿಫಲ ಪ್ರಯತ್ನ ನಂತರ ಇದೀಗ ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್ ಗಳ ಖರೀದಿಗೆ ಕ್ರಮ ಕೈಗೊಳ್ಳುತ್ತಿದೆ.


