ಪಾವಗಡ: ಪೋಷಣ್ ಅಭಿಯಾನದ ಕುರಿತು ಪ್ರತಿಯೊಬ್ಬರಿಗೂ ಅಭಿಯಾನದ ದ್ಯೇಯೋದ್ದೇಶ ಸೇರಿದಂತೆ ಮಕ್ಕಳನ್ನು ಹೇಗೆ ಪೋಷಣೆ ಮಾಡಬೇಕು ಎನ್ನುವುದರ ಅರಿವು ಇರಬೇಕು ಎಂದು ಪಾವಗಡ ಸಿಡಿಪಿಓ ಸುನಿತ ತಿಳಿಸಿದರು.
ಸೋಮವಾರ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದ ಹೊರವಲಯದ ನರೇಂದ್ರ ಪೌಂಡೇಶನ್ ಕಟ್ಟಡದಲ್ಲಿ ವೈ.ಎನ್.ಹೊಸಕೋಟೆ ವೃತ್ತದ ಕೊನೆಯ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯ ಈರಣ್ಣ ಮಾತನಾಡಿ, ಜನರಿಗೆ ಮಾಹಿತಿ ತಲುಪಬೇಕಾದಂತಹ ಕಾರ್ಯಕ್ರಮ ಗ್ರಾಮದ ಹೊರಭಾಗದಲ್ಲಿ ನಡೆಸುತ್ತಿರುವುದು ಬೇಸರದ ಸಂಗತಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಸುಸೂತ್ರವಾಗುವ ರೀತಿಯಲ್ಲಿ ಆಚರಿಸುವಂತೆ ಸಲಹೆ ನೀಡಿದರು.
ಈ ವೇಳೆ ಮೇಲ್ವಿಚಾರಕಿ ವಿಜಯಲಕ್ಷ್ಮೀ, ನರೇಂದ್ರ ಪೌಂಡೇಶನ್ ಸುದರ್ಶನ್, ಸಿಎಚ್ ಒ ಗಂಗಮ್ಮ, ಗ್ರಾಪಂ ಸದಸ್ಯ ಓಬಲಪತಿ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296