ಬೆಂಗಳೂರು: ಶಾಸಕರು ನಾವು ಈ ಬಾರಿ ಹುಷಾರಾಗಿ ಇರುತ್ತೇವೆ ಎಂದು ಆಪರೇಷನ್ ಭೀತಿ ಬಗ್ಗೆ ಮಾಜಿ ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದರು.
ಮಲ್ಲಿಕಾರ್ಜುನ್ ಖರ್ಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 130 ಸೀಟ್‍ಗಳಿಗೂ ಹೆಚ್ಚು ಕಾಂಗ್ರೆಸ್ ಗೆಲ್ಲುತ್ತದೆ. ಸಮೀಕ್ಷೆ ನೋಡಿ ಹೇಳ್ತಿಲ್ಲ, ಜಿಲ್ಲಾವಾರು, ಕೇಡರ್ ವಾರು ಮಾಹಿತಿ ತರಿಸಿದ್ದೇವೆ. 130 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಈ ಬಾರಿ ಗೆಲ್ಲುತ್ತೇವೆ ಎಂದರು.
ದಲಿತ ಸಿಎಂ ಕೂಗಿನ ವಿಚಾರವಾಗಿ ಮಾತನಾಡಿದ ಅವರು, ಅವೆಲ್ಲಾ ನಮಗೆ ಏನೂ ಗೊತ್ತಿಲ್ಲಪ್ಪ, ಸರ್ಕಾರ ತೀರ್ಮಾನ ಮಾಡುತ್ತೇವೆ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮುಖ್ಯಮಂತ್ರಿಗಳ ಆಯ್ಕೆ ಹೈಕಮಾಂಡ್‍ಗೆ ಬಿಟ್ಟಿರೋದು. ಪದೇ ಪದೇ ನಾವೊಂದು ಹೇಳಿಕೆ ಕೊಡೋದು ಸರಿಯಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು.
ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಅವರದ್ದೆ ಆದರೆ ಸರ್ಕಾರ ನಾವ್ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


