ತುಮಕೂರು: ಜಿಲ್ಲೆ ತುಮಕೂರು ತಾಲ್ಲೂಕು, ಬೆಳಧರ ಶಾಲೆಯು ಸ್ವತಂತ್ರ ಪೂರ್ವದಲ್ಲಿಯೇ ಪ್ರಾರಂಭವಾದ ಶಾಲೆಯಾಗಿದ್ದು, ಸುಮಾರು 10–15 ಹಳ್ಳಿಗಳ ಕೃಷಿಕರ, ಬಡ ಅಲ್ಪಸಂಖ್ಯಾತ ಮಕ್ಕಳು, ಪರಿಶಿಷ್ಟಜಾತಿ ಪಂಗಡದ ಅತೀ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಯಾಗಿದೆ. ಕೋರಾ ಹೋಬಳಿಯಲ್ಲಿಯೇ ಅತಿಹೆಚ್ಚು ಮಕ್ಕಳನ್ನು ಹೊಂದಿರುವ ಕನ್ನಡ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವಂತಹ ಶಾಲೆಯ ಮಕ್ಕಳಿಗೆ ಸುರಕ್ಷತೆ ಇಲ್ಲದೇ ಇರುವುದು ಜಿಲ್ಲಾಡಳಿತದ ಬೇಜವಾಬ್ದಾರಿಯಾಗಿದೆ ಎಂದು ತುಮಕೂರಿನ ಕಾಳಜಿ ಫೌಂಡೇಶನ್ ಟೀಕಿಸಿದೆ.
ಈ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಲಗತ್ತಾಗಿರುವಂತೆ ಕಾನೂನು ಬಾಹಿರ ಕಲ್ಯಾಣ ಮಂಟಪದವರು ಶಾಲಾ ಆಟದ ಮೈದಾನವನ್ನೇ ಪಾರ್ಕಿಂಗ್ ಮಾಡಿಕೊಂಡಿರುವ ಪರಿಣಾಮ ಸ್ವಚ್ಛಂದವಾಗಿ ಅಭ್ಯಾಸ ಮಾಡಬೇಕಾದ ಮಕ್ಕಳು, ಕಲ್ಯಾಣ ಮಂಟಪದ ಸದ್ದುಗದ್ದಲಗಳ ನಡುವೆ, ವಾಹನಗಳಿಂದ ಭಯಭೀತರಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವುದು ಬೇಸರವೆನಿಸುತ್ತಿದೆ.
ಕಾಂಪೌಂಡ್ ನಿರ್ಮಾಣಕ್ಕೆ ಹಣವಿಲ್ಲ ಎಂದಿರುವ ತುಮಕೂರು ಜಿಲ್ಲಾಡಳಿತ ಜನವರಿ 10, 2025ರ ಒಳಗೆ ಕಾಂಪೌಂಡ್ ಕಾಮಗಾರಿ ಪ್ರಾರಂಭ ಮಾಡದೇ ಇದ್ದಲ್ಲಿ, ನಾವು ಸಹ ಎಸ್.ಡಿ.ಎಂ.ಸಿ. ಮನವಿ ಮೇರೆಗೆ ಶಾಲೆ ಆಟದ ಮೈದಾನಕ್ಕೆ ಕಾಂಪೌಂಡ್ ಕಾಮಗಾರಿಗಾಗಿ ಹಣ ಹೊಂದಿಸಿ ಜಿಲ್ಲಾಡಳಿತಕ್ಕೆ ಕೊಡಲು ಭಿಕ್ಷಾಟನೆಗೆ ಎಸ್.ಡಿ.ಎಂ.ಸಿ ಆಡಳಿತ ಮಂಡಳಿ, ಬೆಳಧರ ಇವರ ಜೊತೆ ಕೈ ಜೋಡಿಸಿ ಮಕ್ಕಳ ಆಟದ ಮೈದಾನಕ್ಕೆ ಸಹಕರಿಸುತ್ತೇವೆ ಎಂದು ಕಾಳಜಿ ಫೌಂಡೇಶನ್ ತಿಳಿಸಿದೆ.
ಸ್ವಚ್ಚತಾ ಅರಿವು:
ಇತ್ತೀಚೆಗೆ ಕನ್ನಡ ವರ್ಣಮಾಲೆಯ ಒಂದೊಂದು ಅಕ್ಷರಕ್ಕೂ ಸ್ವಚ್ಛತೆಯ ಕುರಿತು ವಾಕ್ಯಗಳನ್ನು ಸಾರ್ವಜನಿಕರೊಬ್ಬರು ರಚನೆ ಮಾಡಿ ಸ್ವಚ್ಛತೆಯ ಕುರಿತು ಒಂದು ಆಂದೋಲನವನ್ನೇ ಮಾಡುತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಒಂದೊಂದು ಅಕ್ಷರದ ಗೋಡೆಗಳಿಗೂ ಒಂದೊಂದು ವಾಕ್ಯಗಳನ್ನು ಬರೆಸಿ ಸಾರ್ವಜನಿಕರಿಗೆ ಸ್ವಚ್ಛತಾ ಅರಿವನ್ನು ಮೂಡಿಸಿದರೆ ತುಮಕೂರು ನಗರದ ಸ್ವಚ್ಛತಾ ಅರಿವು ಮೂಡಿಸಿದಂತಾಗುವುದು ಮತ್ತು ಸದರಿ ವಾಕ್ಯಗಳನ್ನು ಬರೆಸಿದರೆ ಸದರಿ ಖಾಲಿ ಗೋಡೆಗೂ ಒಂದು ಅಂದ ಬರುತ್ತದೆ.
ಆದುದರಿಂದ, ಸದರಿ ಖಾಲಿಗೋಡೆಗೆ ಈ ಮನವಿ ಪತ್ರದೊಂದಿಗೆ ಲಗತ್ತಿಸಿರುವ ಪ್ರತಿಯೊಂದು ಅಕ್ಷರದ ವಾಕ್ಯವನ್ನು ಸದರಿ ಅಕ್ಷರದ ಗೋಡೆಗೆ ಬರೆಸಿ ಸಾರ್ವಜನಿಕರಿಗೆ ಸ್ವಚ್ಚತಾ ಅರಿವು ಮಾಡುವ ವಾಕ್ಯಗಳನ್ನು ಬರೆಸಿ ಸದರಿ ಖಾಲಿ ಇರುವ ಗೋಡೆಗಳಿಗೆ ಒಂದಷ್ಟು ಮೆರಗು ತರುವುದು ಮತ್ತು ಸದರಿ ವಾಕ್ಯಗಳನ್ನು ಬರೆಸಿದ ನಂತರ ಸದರಿ ಗೋಡೆಗಳ ಉದ್ಭಾಟನೆಯನ್ನು ಜಿಲ್ಲೆಯ ಉಸ್ತುವಾರಿ ಸಚಿವರಿಂದಾಗಲೀ, ಅಥವಾ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿದಲ್ಲಿ ತುಮಕೂರಿನ ಕೀರ್ತಿ ಕರ್ನಾಟಕದಾದ್ಯಂತ ಹರಡುವುದರ ಜೊತೆ ಬೇರೆ ಜಿಲ್ಲೆಗಳಿಗೆ ತುಮಕೂರು ಮಹಾನಗರ ಪಾಲಿಕೆ ಮಾದರಿಯಾಗುವುದಲ್ಲದೇ, ನಗರದ ಅಂದವನ್ನು ಹೆಚ್ಚಿಸುತ್ತದೆ ಹಾಗೂ ಮತ್ತು ಸದರಿ ಅಕ್ಷರಗಳನ್ನು ಗೋಡೆ ಮೇಲೆ ಹಾಕಿರುವುದನ್ನು ಸಾರ್ಥಕಗೊಳಿಸುವಂತಾಗುತ್ತದೆ.
ಆದುದರಿಂದ, ತಾವುಗಳು ಸದರಿ ಅಕ್ಷರಗಳ ಖಾಲಿ ಗೋಡೆಗಳ ಮೇಲೆ ಈ ಮನವಿ ಪತ್ರದೊಂದಿಗೆ ಒಂದೊಂದು ಅಕ್ಷರದ ವಾಕ್ಯವನ್ನು ಬರೆಸಿ ತುಮಕೂರಿನ ಕನ್ನಡಪ್ರೇಮವನ್ನು ಹಾಗೂ ಕೀರ್ತಿಪತಾಕೆಯನ್ನು ರಾಜ್ಯದಾದ್ಯಂತ ಪಸರಿಸಲು ಶ್ರೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಕಾಳಜಿ ಫೌಂಡೇಶನ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx