ಸರಗೂರು: ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ಕಾಡು ಮಧ್ಯದಲ್ಲಿ ಇರುವ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಹಾಲರವಿ ಕೊಂಡೋತ್ಸವ ವಿಜೃಂಭಣೆಯಿಂದ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ತಾಲ್ಲೂಕಿನ ಹಾದನೂರು ಗ್ರಾ.ಪಂ. ವ್ಯಾಪ್ತಿಯ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಸಮೀಪದ ಕೆರೆಯಿಂದ ಹಾಲು ಹರವಿ ಸೇವೆ ತೆಗೆದುಕೊಂಡು. ದೇವರನ್ನು ದೇವಾಲಯದವರೆಗೂ ತರಲಾಗುವುದು, ರಾತ್ರಿ ಎಣ್ಣೆ ಮಜ್ಜನ ಇರಲಿದೆ,ನಂತರ ಕೊಂಡೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪುಷ್ಪಾಲಂಕಾರ, ಬೆಲ್ಲದಾರತಿ ಮಾಡಲಾಗಿತ್ತು. 11 ಗಂಟೆ ವೇಳೆಗೆ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಹೊಳೆ ಮೆಟ್ಟಿಸಲಾಯಿತು.ಅಕ್ಕಪಕ್ಕದ ಗ್ರಾಮಗಳಿಂದ ತೆರುಗಳಿಗೆ ಸಿಂಗಾರಗೊಳಿಸಿ ಮೆರವಣಿಗೆ ನಡೆಸಿ ಮಧ್ಯಾಹ್ನ 12ರ ವೇಳೆಗೆ ಮಹದೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಅಗ್ನಿಕೊಂಡ ಪ್ರವೇಶ ಮಾಡಲಾಯಿತು. ಅರ್ಚಕ ಅಗ್ನಿಕೊಂಡ ಪ್ರವೇಶ ಮಾಡುತ್ತಿದ್ದಂತೆ ಭಕ್ತರು ಜಯಘೋಷ ಮಾಡುವ ಮೂಲಕ ಅಗ್ನಿಕೊಂಡವನ್ನು ಪ್ರವೇಶಿಸಿದರು.
ಸಾವಿರಾರು ಭಕ್ತರು ಈ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧ ಕಾರ್ಯಕ್ರಮಗಳಿಗೆ ಹಾಗೂ ದೇವಸ್ಥಾನದ ಸುತ್ತಲೂ ಅರಣ್ಯ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಸೋಲಾರ್ ವಿದ್ಯುತ್ ಸಂಪರ್ಕ ಅವಕಾಶವನ್ನು ನೀಡಲಾಯಿತು.
ದೇವರ ಗುಡಿಯಲ್ಲಿ ವಿಗ್ರಹ ಈ ಬಾರಿ ದೇವರ ಗರ್ಭಗುಡಿ ನೋಡಲು ಸಂತೋಷ.ದೇವರು ದರ್ಶನ ಪಡೆಯಲು ಭಕ್ತರು ನೂಕ್ಕುನಗ್ಗಲು. ಪ್ರತಿವರ್ಷದಂತೆ ಚಂಡೆ ಮೇಳ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ದೇವಸ್ಥಾನಕ್ಕೆ ಹೋಗಲು ಭಕ್ತರಿಗೆ ಬೆಳ್ಳಿಗೆನಿಂದ ಸಂಜೆ 8 ರಿಂದ 9 ಗಂಟೆ ಸಮಯದಲ್ಲಿ ಹಾಲಹರವಿ ಕೊಂಡೋತ್ಸವ ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಬಸ್ಗಳು ಕಾಡಿನ ಮಧ್ಯೆ ಭಾಗದಲ್ಲಿ ಟೈರ್ ಪಂಕ್ಚರ್ ಯಾಗಿ ಒಂದು ಗಂಟೆ ಕಾಲ ಕಾದು ಕುಳಿತು ನಂತರ ಭಕ್ತರು ಬಸ್ ರಸ್ತೆ ಹಾದುಹೋಗುವ ಸಮಯದಲ್ಲಿ ಒಂದು ಕ್ಕೂಂದು ಜಾಮ್ ಯಾಗಿದ್ದರಿಂದ ದೇವರು ನೋಡಲು ಹಾಗಿದೆ ಇದ್ದಾಗ ಕಾಲು ನಡುಗೆಯಲ್ಲಿ ಹೋಗಿ ದೇವರ ದರ್ಶನ ಪಡೆದುಕೊಂಡು ಬಂದರು.ಇದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡಲಾಗಿದ್ದರೂ ಕೆಎಸ್ಸಾರ್ಟಿಸಿ ಬಸ್ ಇದ್ದರು ದೇವಸ್ಥಾನಕ್ಕೆ ಹೋಗಲು ತೊಂದರೆ ಉಂಟಾಗಿ ಇದ್ದರಿಂದ ಭಕ್ತರು ಬೇಸರ ವ್ಯಕ್ತಪಡಿಸಿದರು.
ಮಹದೇಶ್ವರ ಜಾತ್ರಾ ಮಹೋತ್ಸವಕ್ಕೆ ಬಂದು ಭಕ್ತರಿಗೆ ಸಮಿತಿ ವತಿಯಿಂದ ಅನ್ನದಾಸೋಹ ಮಾಡುತ್ತಿದ್ದರು.ಅದರಂತೆ ಈ ಬಾರಿ ದತ್ತಿ ಇಲಾಖೆವತಿಯಿಂದ ಅಂಗವಾಗಿ ಬೆಳಗಿನಿಂದಲೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು .
ಶಾಸಕ ಅನಿಲ್ ಚಿಕ್ಕಮಾದು ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಸ್ಥಳೀಯ ಮುಖಂಡರು ಶಾಸಕರಿಗೆ ಮನವಿ ಕಳೆದ ವರ್ಷ ಪ್ರತಿವರ್ಷದಂತೆ ಧಾರ್ಮಿಕ ಕಾರ್ಯಕ್ರಮಗಳು ಮಾಡಿಕೊಂಡು ಬರುತ್ತಿದವು.ಈ ಬಾರಿ ದತ್ತಿ ಇಲಾಖೆ ಸೇರಿಕೊಂಡಾಗ ನಾವುಗಳು ಹೆಚ್ಚು ಬೇಲದಕುಪ್ಪೆ ಮಹದೇಶ್ವರ ಹೆಚ್ಚು ರೀತಿಯಲ್ಲಿ ನಡೆಯುತ್ತದೆ ಎಂದು ಖುಷಿಯಲ್ಲಿ ಇದ್ದವು.
ಅದರೆ ಇಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಥೋತ್ಸವಕ್ಕೆ ಮಂಗಳವಾದ್ಯ.ದೇವಸ್ದಾನಕ್ಕೆ ವಿದ್ಯುತ್ ವ್ಯವಸ್ಥೆ ಮಾಡಲಾಗಿತ್ತು ಎಂದು ಶಾಸಕ ಮುಂದೆ ಹೇಳಿದರು.
ನಂತರ ಮಾತನಾಡಿ ಮೊದಲು ಸ್ಥಳೀಯ ಮುಖಂಡರು ದೇವಸ್ಥಾನದ ಟ್ರಸ್ಟ್ ವತಿಯಿಂದ ಜಾತ್ರಾ ಮಹೋತ್ಸವನ್ನು ಮಾಡಿಕೊಂಡು ಬರುತ್ತಿದ್ದರು.ಅದರೆ ಈ ಬಾರಿ ಎರಡನೇ ಬಾರಿಗೆ ದತ್ತಿ ಇಲಾಖೆ ಅಧಿಕಾರಿ ವಹಿಸಿಕೊಂಡು ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಮಾಡಿದ್ದಾರೆ ಎಂದರು.ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸರಿಯಾದ ರೀತಿಯಲ್ಲಿ ಮಾಡಲಾಗುವುದು ಎಂದರು.
ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧ ಪಟ್ಟ ಮಾಹಿತಿಯನ್ನು ನೀಡಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ.ದೇವಸ್ಥಾನದಿಂದ ದೇವರ ದರ್ಶನ ಪಡೆದು ಚೈನ್ ಗೇಟ್ ಬಳಿ ನೀರಿನ ಘಟಕ.ಬೈಕ್ ಮತ್ತು ಕಾರ್.ಪಾರ್ಕಿಂಗ್ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದೇ ಮೊದಲ ಬಾರಿಗೆ ಕುಂಭಾಭಿಷೇಕ:
ಶ್ರೀಕ್ಷೇತ್ರ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ವಿಮಾನ ಗೋಪುರ, ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಮತ್ತು ಶ್ರೀಯವರ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ದಂದು ಜರುಗಿತು, ಆಲಯ ಪ್ರವೇಶ, ಗಣಪತಿ ಪೂಜೆ, ಹೋಮ-ಹವನ, ರುದ್ರಾಭಿಷೇಕ ಪಾರಾಯಣ, ನೈವೇದ್ಯ ಮಹಾಮಂಗಳಾರತಿ ಇರಲಿದೆ. ನ. ಭಾನುವಾರ ರಂದು ಬ್ರಾಹ್ಮಿ ಮಹೂರ್ತದಲ್ಲಿ ನವರತ್ನನ್ಯಾಸ ವಿಮಾನ ಕಳಸ ಸ್ಥಾಪನೆ, ಪ್ರಾಣಪ್ರತಿಷ್ಠೆ, ಪೂರ್ಣಾಹುತಿ ನಂತರ ಮಕರ ಲಗ್ನದಲ್ಲಿ ಮಧ್ಯಾಹ್ನ 12ಕ್ಕೆ ಕುಂಭಾಭಿಷೇಕ, ಮಹಾಮಂಗಳಾರತಿ, ರಾಜೋಪಚಾರ, ತೀರ್ಥ ಪ್ರಸಾದ ವಿನಿಯೋಗ, ಸ್ವಾಮಿ ಅವರಿಗೆ ದೇವಸ್ಥಾನ ಸಮೀಪವಿರುವ ಕೆರೆಯಿಂದ ವಿವಿಧ ಪೂಜೆಗಳನ್ನು ಸಲ್ಲಿಸಿ, ಹಾಲು ಹರವಿ ಸೇವೆ ತೆಗೆದುಕೊಂಡು ದೇವರನ್ನು ದೇವಾಲಯದವರೆಗೂ ಉದ್ಬವಸ್ಥಾನಕ್ಕೆ ಕರೆದೊಯ್ಯಲಾಗುವುದು.
ರಾತ್ರಿ ಎಣ್ಣೆಮಜ್ಜನ ಮತ್ತು ಪ್ರಸಾದ ವಿನಯೋಗ ಇರಲಿದೆ. ವೀರಗಾಸೆ ನೃತ್ಯ, ಪೂಜಾ ಕುಣಿತ, ಕೋಲಾಟ, ಕಂಸಾಳೆ ರಸ್ತೆಯ ಮೂಲಕ ನೃತ್ಯ ಪ್ರದರ್ಶನ ನಡೆಯಲಿದೆ. ನಂತರ ಕೊಂಡೋತ್ಸವ ಇರಲಿದೆ. 26ಕ್ಕೆ ರುದ್ರಾಕ್ಷಿ ಮಂಟಪ, ಹುಲಿ ವಾಹನ, ನಂದಿಧ್ವಜದೊಂದಿಗೆ ರಥೋತ್ಸವ ನೆರವೇರಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಮಿತಿ ಸದಸ್ಯರು ತಿಳಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296