ಭಾರತೀಯ ಜನತಾ ಪಕ್ಷದ ಎರಡನೇ ತಂಡ ಬೆಳಗಾವಿ ಉಸ್ತುವಾರಿ ಸಚಿವರಗಳಾದ ಗೋವಿಂದ್ ಕಾರಜೋಳ್ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಬೆಳಗಾವಿ ಕರ್ನಾಟಕದ ಕಿರೀಟ ಎಂದಿದ್ದಾರೆ.
ಕನ್ನಡದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತ ಭಾಷಣ ಪ್ರಾರಂಭಿಸಿದ ಅವರು ಸ್ವತಂತ್ರದ ಬೆಳ್ಳಿ ಚುಕ್ಕಿಯಾದ ವೀರ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪಾದಸ್ಪರ್ಶವಾಗಿದೆ ಏರ್ ಮಾರ್ಸ್ ಅಲ್ಲಿ ಕರಿಯಪ್ಪ ಅಂತ ವೀರರನ್ನು ಜನ್ಮ ನೀಡಿದ ಈ ಭೂಮಿ ತಾಯಿಗೆ ನನ್ನ ವಂದನೆಗಳು ಎಂದು ಕರ್ನಾಟಕ ಭೂಮಿಗೆ ತಮ್ಮ ನಮನಗಳನ್ನು ಸಲ್ಲಿಸಿದರು.
ಭೂಮಿ ನಮಗೆ ಪ್ರೇರಣೆ ಅದರ ಸಲುವಾಗಿ ಮುಖ್ಯಮಂತ್ರಿಗಳು ಈ ಸ್ಥಳವನ್ನು ವಿಜಯ ಸಂಕಲ್ಪ ಯಾತ್ರೆಗೆ ಆಯ್ಕೆ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷ ಎಲ್ಲರಿಗೂ ಸಮಭಾವ ಸಮಬಾಳು ಸಮಾನ ಹಕ್ಕು ಕೊಡುವ ಪಕ್ಷ ನಾವು ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿದ್ದೇವೆ ಎಂದರು.
ತಮ್ಮ ಭಾಷಣ ಉದ್ದಕ್ಕೂ ಸರ್ಕಾರದ ಸಾಧನೆಗಳು ಕುರಿತು ಹೇಳಿದರಲ್ಲದೆ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷ ಗೌರವಣಿತವಾಗಿ ನಡೆದುಕೊಂಡಿದೆ. ಅವರ ಅನಾರೋಗ್ಯದಿಂದಾಗಿ ಸ್ವಯಂ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಪಕ್ಷ ಸಂಘಟನೆಗಾಗಿ ನಾನು ದುಡಿಯುತ್ತೇನೆ ಎಂದು ಹೇಳಿದಾಗ ಅವರ ಸಹಮತದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯಿತು. ಕೇಂದ್ರದಲ್ಲಿ ಅವರಿಗೆ ಸಂಸತ್ತಿಗೆ ಮಂಡಲಕ್ಕೆ ಗೌರವಣಿತ ಸ್ಥಾನ ನೀಡಲಾಗಿದೆ ಎಂದು ಯಡಿಯೂರಪ್ಪ ಅವರ ಕುರಿತು ಪ್ರಸಂಸೆ ಯ ಮಾಡಿದರು.
ಇದೆ ವೇಳೆ ಭಾರತ್ ಜೋಡು ಯಾತ್ರೆ ಕುರಿತು ಮಾತನಾಡಿದ ರಾಜನಾಥ ಸಿಂಗ್ ರಾಹುಲ್ ಗಾಂಧಿ ಯಾವ ಭಾರತ್ ಜೋಡು ಯಾತ್ರೆ ಮಾಡುತ್ತಿದ್ದಾರೆ ನಮಗೆ ಅರ್ಥವಾಗುತ್ತಿಲ್ಲ ಮೊದಲೇ ಭಾರತ ಎರಡು ತುಂಡುಗಳಾಗಿ ಒಂದು ಪಾಕಿಸ್ತಾನ ಬಾಂಗ್ಲಾದೇಶ ಆಗಿದೆ. ಅವುಗಳನ್ನು ಒಂದು ಮಾಡುವಂತ ಮಾತನಾಡಬೇಕಾಗಿದೆ ಕಾಂಗ್ರೆಸ್ ಪಕ್ಷ ಜನರನ್ನು ಬ್ರಹ್ಮವಿತರಾಗಿ ಸುತ್ತಿದ್ದಾರೆ ಇದ್ದಾರೆ ನರೇಂದ್ರ ಮೋದಿ ವಿಶ್ವವೇ ಇವರ ನಾಯಕತ್ವವನ್ನು ಮೆಚ್ಚಿದೆ ಅಲ್ಲದೆ ವಿಶ್ವಸಂಸ್ಥೆ ನರೇಂದ್ರ ಮೋದಿ ಅವರನ್ನು ಅತ್ಯಂತ ಪ್ರಭಾವಿ ನಾಯಕರು ಎಂದು ಒಪ್ಪಿಕೊಂಡಿದೆ ಎಂದರು.
ಇದೆ ವೇಳೆ ಕೋವಿಡ್ ಮಹಾಮಾರಿ ವೇಳೆ ಭಾರತ ನಿರ್ವಹಿಸುವಂಥ ಕಾರ್ಯ ನೀವು ಎಲ್ಲರೂ ಲಸಿಕೆಗಳನ್ನು ಪಡೆದಿದ್ದೀರಿ ಆದರೆ ಅಮೇರಿಕಾ ಬ್ರಿಟನ್ ಅಂತ ಮಹಾ ದೊಡ್ಡ ದೇಶಗಳು ಕೂಡ ತಮ್ಮ ನಾಗರಿಕರಿಗೆ ಲಸಿಕೆ ಕೊಡುವುದರಲ್ಲಿ ವಿಫಲವಾಗಿದೆ. ಇದು ಭಾರತ ಒಂದು ಬಹುದೊಡ್ಡ ಸಾಧನೆ ಎಂದು ನಾವು ಇಲ್ಲಿ ಹೇಳಬಹುದು.
ಶಾದಿ ಭಾಗ್ಯ ತಲಾಕ್ ಪ್ರಸ್ತಾಪಿಸಿ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳು ನಮ್ಮ ಸಹೋದರಿಯರು ಮತ್ತು ತಾಯಂದಿರಿದ್ದಾರೆ ಅವರಿಗಾಗಿ ನಮ್ಮ ಸಹಾನುಭೂತಿ ಇದೆ ಅದಕ್ಕಾಗಿ ತಲಾಕ್ ಅಂತ ಅದೃಷ್ಟ ಕಾಯ್ದೆಯನ್ನು ಅಂತ ಮಾಡಲಾಗಿದೆ ಬಸವರಾಜ ಬೊಮ್ಮಾಯಿ ಒಬ್ಬ ಜನಪ್ರಿಯ ಮುಖ್ಯಮಂತ್ರಿ ಅವರೊಬ್ಬ ಕಾಮನ್ ಪೀಪಲ್ ಅವರ ಮಾತಿನಲ್ಲಿ ತಿಳಿಯುತ್ತದೆ ಅವರು ಎಷ್ಟು ಸೌಮ್ಯ ಸ್ವಭಾವದವರು ಎಂದು ಆಡಳಿತ ಚತುರರು ಕೂಡ ಹೌದು ಮುಂದುವರೆದಿನಗಳಲ್ಲಿ ನೀವು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಚುನಾವಣೆಯನ್ನು ಎದುರಿಸುತ್ತೇವೆ. ನಿಮ್ಮ ಆಶೀರ್ವಾದ ನಮಗೆ ಲಭ್ಯವಾಗಬೇಕು ಎಂದು ಜನರಲ್ಲಿ ಕೇಳಿಕೊಂಡರು.
ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ನವೀನ್ ಕಟೀಲ್ ಬೆಳಗಾವಿ ಗ್ರಾಮೀಣ ಅಧ್ಯಕ್ಷರಾದ ಸಂಜಯ್ ಪಾಟೀಲ್ ಕೇಂದ್ರ ಕಲ್ಲಿದ್ದಲು ಹಾಗೂ ಸಚಿವರುಗಳಾದ ಪ್ರಹ್ಲಾದ ಜೋಶಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಗೋವಿಂದ ಕಾರಜೋಳ್, ಸಚಿವರುಗಳಾದ ಸಿ.ಸಿ ಪಾಟೀಲ್, ಭೈರತಿ ಬಸವರಾಜ್, ಶಶಿಕಲಾ ಜೊಲ್ಲೆ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅಥಣಿ ಶಾಸಕ ಮಹೇಶ್ ಕುಮ್ಟಳ್ಳಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಶಾಸಕರುಗಳಾದ ಅಭಯ್ ಪಾಟೀಲ್ ಅನಿಲ್ ಬೆನಕೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸೌದಿ, ಮಾಜಿ ಶಾಸಕ ಅರವಿಂದ್ ಪಾಟೀಲ್ ಹಾಗೂ ಭಾರತೀಯ ಜನತಾ ಪಕ್ಷದ ಬೆಳಗಾವಿ ಜಿಲ್ಲಾ ಗ್ರಾಮೀಣ ಮಾಧ್ಯಮ ವಕ್ತಾರ ಎಫ್. ಎಸ್ ಸಿದ್ದನಗೌಡ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


