ಬೆಳಗಾವಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಭಾವತಿ ಮಾಸ್ತಮರಡಿ ಅವರು ಇಂದು ವಡಗಾವಿಯ ತೆಗ್ಗಿನ ಗಲ್ಲಿ, ಚಾವಡಿ ಗಲ್ಲಿ, ಮಲ್ಲಿಕಾರ್ಜುನ ದೇವಸ್ಥಾನ ಪ್ರದೇಶ ಮುಂತಾದ ಕಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಮನೆಗಳು, ಅಂಗಡಿ-ಮುಗ್ಗಟ್ಟುಗಳಿಗೆ ಭೇಟಿ ನೀಡಿ, ಹಿರಿಯರು, ಯುವಕರು, ಮಹಿಳೆಯರು ಮತ್ತು ಎಲ್ಲ ವ್ಯಾಪಾರಿಗಳಿಗೆ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಲಾಯಿತು. ಅವರೆಲ್ಲರೂ ಕೂಡ ಈ ಚುನಾವಣೆಯಲ್ಲಿ ಜೊತೆ ನಿಂತು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ತರಲು ಸಹಕರಿಸುವುದಾಗಿ ಭರವಸೆ ನೀಡಿದರು.
ಜೈತನ ಮಾಳ ದಲ್ಲಿ ಪ್ರಚಾರ ಸಭೆ ನಡೆಸಿ, ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರಿಗೆ ಜನರು ಗೌರವಯುತವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಕಾಂಗ್ರೆಸ್ ಪಕ್ಷದ ಸಾಧನೆಗಳು, ಯೋಜನೆಗಳ ಬಗ್ಗೆ ಅವರಿಗೆಲ್ಲ ತಿಳಿಸಿದರು.
ಜನರು ಕಾಂಗ್ರೆಸ್ ಪರವಾಗಿ ಅತ್ಯಂತ ಒಲವು ಹೊಂದಿದ್ದು, ಬರುವ ಚುನಾವಣೆಯಲ್ಲಿ ನನ್ನ ಜೊತೆ ನಿಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ವಡಗಾವಿಯ ತೆಗ್ಗಿನ ಗಲ್ಲಿ, ಚಾವಡಿ ಗಲ್ಲಿ, ಮಲ್ಲಿಕಾರ್ಜುನ ದೇವಸ್ಥಾನ ಪ್ರದೇಶ ಮುಂತಾದ ಕಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಮನೆಗಳು, ಅಂಗಡಿ-ಮುಗ್ಗಟ್ಟುಗಳಿಗೆ ಭೇಟಿ ನೀಡಿ, ಹಿರಿಯರು, ಯುವಕರು, ಮಹಿಳೆಯರು ಮತ್ತು ಎಲ್ಲ ವ್ಯಾಪಾರಿಗಳಿಗೆ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಲಾಯಿತು. ಅವರೆಲ್ಲರೂ ಕೂಡ ಈ ಚುನಾವಣೆಯಲ್ಲಿ ಜೊತೆ ನಿಂತು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ತರಲು ಸಹಕರಿಸುವುದಾಗಿ ಭರವಸೆ ನೀಡಿದರು.
ಮಹಾದ್ವಾರ ರೋಡ್ – ಕಪಿಲೇಶ್ವರ ದೇವಸ್ಥಾನದ ಪರಿಸರದಲ್ಲಿ ಮನೆಮನೆಗೆ ಭೇಟಿ ಕೊಟ್ಟು ಪ್ರಚಾರ ನಡೆಸಿ. ಸ್ಥಳೀಯರು ಗೌರವಪೂರ್ವಕವಾಗಿ ಬರಮಾಡಿಕೊಂಡು, ಸನ್ಮಾನಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ ಎಂಬ ಧೃಢನಿರ್ಧಾರ ವ್ಯಕ್ತಪಡಿಸಿದರು.
ಸ್ಥಳೀಯರು ತಮ್ಮ ಅನೇಕ ಕಷ್ಟಗಳನ್ನು ತೋಡಿಕೊಂಡರು. ಅದರಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ವ್ಯವಸ್ಥೆ ಇಲ್ಲದಿರುವುದು, ನೈರ್ಮಲ್ಯದ ಕೊರತೆ, ಸರಿಯಾಗಿ ರಸ್ತೆ ಇಲ್ಲದಿರುವುದು ಮುಂತಾದವುಗಳ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಿದರು.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿ ಹೇಳಲಾಯಿತು. ಅದರ ಜೊತೆಗೆ ಕಾಂಗ್ರೆಸ್‌ನ ೫ ಗ್ಯಾರಂಟಿಗಳನ್ನೂ ಕೂಡ ಜನರಿಗೆ ವಿವರಿಸಿ, ಜನಪರ ಯೋಜನೆಗಳು ಜಾರಿಗೆ ಬರುವಂತಾಗಲು ಈ ಬಾರಿ ತಪ್ಪದೇ ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಹುಂಚಾನಟ್ಟಿ ಗ್ರಾಮದಲ್ಲಿ ಪ್ರಚಾರಾರ್ಥ ಸಭೆ ನಡೆಸಿದೆ. ಜನರಿಗೆ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಕರೆ ನೀಡಲಾಯಿತು. ಸ್ಥಳೀಯರು ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಚುನಾಯಿಸಿ ತಂದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮನವರಿಕೆ ಮಾಡಿಕೊಡಲಾಯಿತು.
ಸ್ಥಳೀಯರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದರು. ವಾಲ್ಮೀಕಿ ನಗರದ ಉದ್ಯಮಬಾಗದಲ್ಲಿ ಇಂದು ಸ್ಥಳೀಯ ಜನರೊಂದಿಗೆ ಚರ್ಚೆ ನಡೆಸಿದೆ. ಸ್ಥಳೀಯರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುವುದಾಗಿ ಘೋಷಿಸಿದರು.
ಸ್ಥಳೀಯರು ಮೂಲಭೂತ ಸೌಕರ್ಯಗಳ ಕೊರತೆಯಿಂದ ತುಂಬಾ ಕಷ್ಟ ಅನುಭವಿಸುತ್ತಿದ್ದು, ತುಂಬಾ ನೋವಿನಿಂದ ತಮ್ಮ ಮಾತುಗಳನ್ನು ಹೊರಹಾಕಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬಂದಲ್ಲಿ, ಮೂಲಭೂತ ಸೌಕರ್ಯಗಳ ಕೊರತೆಯನ್ನು ತೊಲಗಿಸಿ, ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಹಕರಿಸುವುದಾಗಿ ಭರವಸೆ ನೀಡಲಾಯಿತು.
ರಾಜಾರಾಮ ನಗರ ಉದ್ಯಮಬಾಗ ದಲ್ಲಿ ಪ್ರಚಾರ ಕಾರ್ಯ ನಡೆಸಿ. ನೆರೆದಿದ್ದ ಸ್ಥಳೀಯರು ಗೌರವ ಸನ್ಮಾನ ನೀಡಿದರು. ತಡವಾದರೂ ಸರಿ, ನನ್ನ ಜೊತೆ ಚರ್ಚಿಸಲು ಬಹಳ ಹೊತ್ತು ಕಾಯ್ದಿದ್ದರು. ಅವರೆಲ್ಲರ ಕಷ್ಟಗಳಿಗೆ ಆಧಾರವಾಗಿ, ಅಭಿವೃದ್ಧಿ ಕೆಲಸಗಳಿಗೆ ನೆರವಾಗಿ, ಅವರ ಜೊತೆ ನಿಲ್ಲುವ ವಿಶ್ವಾಸ ನೀಡಿದೆ.
ಅದೇ ರೀತಿ ಸ್ಥಳೀಯರು ಕೂಡ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಯೇ ತರುತ್ತೇವೆ ಎಂದು ಅತ್ಯಂತ ಗಟ್ಟಿಯಾಗಿ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


