ನಾನು ಕೂಡ ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ ನಾನು1994 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಗ್ರಾಮೀಣ ಅಧ್ಯಕ್ಷರಾಗುವವರೆಗೆ ಪಕ್ಷವನ್ನು ಸಂಘಟನೆ ಮಾಡಿದ್ದೇನೆ ಬೆಳಗಾವಿ ನಗರಕ್ಕೆ ಸ್ವತಂತ್ರದ ನಂತರ ಇಲ್ಲಿವರೆಗೂ ಲಿಂಗಾಯತ ಸಮುದಾಯದ ಅಭ್ಯರ್ಥಿ ಅವಕಾಶ ಸಿಕ್ಕಿಲ್ಲ.
ಈ ಬಾರಿ ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಲಿಂಗಾಯತ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಜನರ ಹಾಗೂ ಸಮುದಾಯದ ಬೇಡಿಕೆ ಇದೆ.ಕೆ ಪಿ ಸಿ ಸಿ ಕಾರ್ಯಧ್ಯಕ್ಷರು ನಮ್ಮ ಹಿರಿಯ ನಾಯಕರು ಸತೀಶ್ ಜಾರಕಿಹೊಳಿ ಅವರ ನನ್ನ ಬೆಂಬಲವಿದೆ, ಪಕ್ಷದ ವರಿಷ್ಠ ನಾಯಕರುಗಳು ಈ ಬಾರಿ ನನ್ನ ಮೇಲೆ ವಿಶ್ವಾಸ ಇಡುತ್ತಾರೆಂದು ನಂಬಿದ್ದೇನೆ.
ಕಾಂಗ್ರೆಸ್ ಪಕ್ಷ 2023ರ ಚುನಾವಣೆ ಒಗ್ಗಟ್ಟಿನಿಂದ ಎದುರಿಸಿ ಜಿಲ್ಲೆಯಲ್ಲಿ 12 ರಿಂದ 15 ಸ್ಥಾನ ಪಡೆಯಲಿದೆ. ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರು ವಿನಯ್ ನವಲಗಟ್ಟಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


