ಬೆಳಗಾವಿ: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನಂತೆ ಎಲೆಕ್ಷನ ಕಾವು ಕೂಡಾ ಹೆಚ್ಚಾಗಿದ್ದು ಗಾಲಿ ಜನಾರ್ಧನ ರೆಡ್ಡಿರವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮನೆ ಮನೆಯಲ್ಲಿ ಹೆಸರು ಮಾಡಿದೆ.
ಬೆಳಗಾವಿಯ ರಾಮತೀರ್ಥ ನಗರದ ನಿವಾಸಿ ಪ್ರವೀಣ ಬ ಹಿರೇಮಠರವರು ಬೆಳಗಾವಿಯ ಉತ್ತರ ವಲಯದಿಂದ ಕಣಕ್ಕಿಳಿದ್ದಿದ್ದು ತಮ್ಮ ರಾಜಕೀಯ ಭವಿಷ್ಯಕ್ಕೆ ಕಹಳೆ ಉದಿದ್ದಾರೆ.
ಬೆಳಗಾವಿಯ ಉತ್ತರ ವಲಯದಲ್ಲಿ ಚುನಾವಣಾ ಪ್ರಚಾರ ಪ್ರಾರಂಭ ಮಾಡಿದ ಪ್ರವೀಣರವರು ವಾಕ್ ವಿಥ್ ಟಾಕ್ ಎಂಬ ಹೊಸ ಪ್ರಯತ್ನದೊಂದಿಗೆ ತಮ್ಮ ಪಕ್ಷದ ಸಂಘಟನೆ ಮತ್ತು ರಹವಾಸಿಗಳ ಜೊತೆ ಬೆರೆತು ಜನರ ಅಹವಾಲು ಸ್ವೀಕರಿಸಿದ್ದಾರೆ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಮನವರಿಕೆ ಮಾಡಿಸಿದ್ದಾರೆ.
ವಾಕ ವಿಥ್ ಟಾಕ್ :
ಹೌದು ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಪ್ರವೀಣ ವಾಕ್ ವಿಥ್ ಟಾಕ್(walk with talk) ಎಂಬ ಯೋಜನೆಯೊಂದಿಗೆ ಬೆಳಿಗ್ಗೆ ಮತ್ತು ಸಾಯಂಕಾಲ ವಾಕ್ ಮಾಡುತ್ತ ಪ್ರತಿ ಜನರ ಜೊತೆ ಮಾತಾಡಿ ಫಿಟ್ನೆಸ್ ಮತ್ತು ದಿನ ವ್ಯಾಯಮದ ಬಗ್ಗೆ ತಿಳಿ ಹೇಳುತ್ತಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಈ ಕೆಳಗಿನಂತಿದೆ.
ಬಸವೇಶ್ವರ ರೈತ ಭರವಸೆ
ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ವಾರ್ಷಿಕ ರೂ.15,000/-ಗಳ ಬಂಡವಾಳದ ನೆರವು
ದಿನನಿತ್ಯ ರೈತರಿಗೆ ನಿರಂತರವಾಗಿ ಉಚಿತ 9 ಗಂಟೆ ವಿದ್ಯುಚ್ಛಕ್ತಿ ಸರಬರಾಜು ಪ್ರತಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ರೈತ ಭರವಸೆ ಕೇಂದ್ರವನ್ನು ಸ್ಥಾಪಿಸಿ ಪ್ರತಿ ರೈತರ ಮನೆ ಮನೆಗಳ ಬಾಗಿಲಿಗೆ ರಸಗೊಬ್ಬರ, ಬೀಜಗಳನ್ನು ವಿತರಿಸಲಾಗುವುದು.
ರೈತರು ಬೆಳೆದ ಬೆಳೆಗೆ ಕೇಂದ್ರ ಸರ್ಕಾರ ನೀಡುವ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್‌ಗೆ ರೂ.100/-ಗಳ ಬೆಂಬಲ ಬೆಲೆ ಬೆಳೆಯ ವಿಮೆಯ ಬಗ್ಗೆ ರೈತರಿಗೆ ಚಿಂತೆ ಬೇಡ, ವಿಮೆಯ ಕಂತನ್ನು ಸರ್ಕಾರವೇ ಭರಿಸುವುದು.
ಬಡ್ಡಿ ರಹಿತ ಬೆಳೆಯ ಸಾಲವನ್ನು ನೀಡಲಾಗುವುದು.
5ಎಕರೆವರೆಗೆ ಜಮೀನು ಹೊಂದಿರುವ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಬೋರ್ವೆಲ್ ಅನ್ನು ಹಾಕಲಾಗುವುದು
ಪ್ರತಿ ತಾಲೂಕಿನಲ್ಲೂ ಶೀತಲ ಶೇಖರಣಿ ಉಗ್ರಾಣಗಳನ್ನು ನಿರ್ಮಿಸಲಾಗುವುದು. ಪ್ರತಿಕ್ಷೇತ್ರದಲ್ಲೂ ಆಹಾರ ಸಂಸ್ಕರಣೆ ಅವಶ್ಯವಿದ್ದಲ್ಲಿ ನಿರ್ಮಾಣ ಮಾಡುವುದು.ಕೃಷಿ ಟ್ರ್ಯಾಕ್ಟರ್‌ಗಳಿಗೆ ಟೋಲ್ ತೆರಿಗೆ ಮತ್ತು ರಸ್ತೆ ತೆರಿಗೆಯನ್ನು ಮನ್ನಾ ಮಾಡಲಾಗುವುದು.
ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆಗೆ ಒಳಗಾದ ರೈತನ ಕುಟುಂಬಕ್ಕೆ 7 ಲಕ್ಷ ರೂ. ಪರಿಹಾರ. ಸಾಲಗಾರನ ಕೈಗೆ ಮೊತ್ತ ಸೇರದಂತೆ ವಿಧಾನಸಭೆಯಲ್ಲಿ ಕಾಯಿದೆ ಅಂಗೀಕರಿಸಲಾಗುವುದು ಮತ್ತು ಮೃತ ರೈತ ಕುಟುಂಬದ ಪರವಾಗಿ ಸರ್ಕಾರ ನಿಲ್ಲುತ್ತದೆ.
ಬಸವೇಶ್ವರ ಆರೋಗ್ಯ ಕವಚ
ವಾರ್ಷಿಕ ಆದಾಯ ರೂ.5 ಲಕ್ಷ ಗಿಂತ ಕಡಿಮೆ ಇರುವ ಎಲ್ಲಾ ವರ್ಗಗಳಿಗೆ ಆರೋಗ್ಯಶ್ರೀ ಒದಗಿಸಲಾಗುವುದು.
ರೂ.1000/- ಗಿಂತ ಅಧಿಕ ವೆಚ್ಚದಲ್ಲಿ ಆರೋಗ್ಯಶ್ರೀ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವುದು.
ಆರೋಗ್ಯಶ್ರೀ ಚಿಕಿತ್ಸೆಯು ರೂ.20 ಲಕ್ಷ ವೆಚ್ಚದ ವರೆಗೆ ಹೊರ ರಾಜ್ಯಾದ್ಯಂತ (ಹೈದರಾಬಾದ, ಚೆನ್ನೈ, ಮುಂಬೈ, ದೆಹಲಿ ) ಅನ್ವಯಿಸುತ್ತದೆ.
ಎಲ್ಲಾ ರೋಗಗಳು ಮತ್ತು ಶಸ್ತ್ರಚಿಕಿತ್ಸೆ ಆರೋಗ್ಯಶ್ರೀ ಅಡಿಯಲ್ಲಿ ಒಳಪಡಿಸಲಾಗುವುದು
ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯ ನಂತರ ವಿಶ್ರಾಂತಿ ಸಮಯದಲ್ಲಿ ವ್ಯಕ್ತಿಯ ಕುಟುಂಬಕ್ಕೆ ಹಣಕಾಸಿನ ನೆರವು.
ಕಿಡ್ನಿ, ಥಲಸ್ಸೆಮಿಯಾ ಮತ್ತು ಪರಿನಿಯಲ್ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ತಿಂಗಳಿಗೆ ರೂ 10,000/- ಪಿಂಚಣಿ ನೀಡಲಾಗುತ್ತದೆ.
ಉತ್ತಮ ಆರೋಗ್ಯಶ್ರೀ ಚಿಕಿತ್ಸೆಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸರಿಸಮನಾಗಿ ಎರಡು ವರ್ಷಗಳಲ್ಲಿ ಆಧುನೀಕರಿಸಲಾಗುವುದು. ಅಗತ್ಯಕ್ಕೆ ತಕ್ಕಂತೆ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲಾಗುವುದು.
ರಾಣಿ ಚೆನ್ನಮ್ಮ ಅಭಯ ಹಸ್ತ
ಗೃಹಿಣಿಯರಿಗೆ ಮಾಸಿಕ ರೂ.2,500/-ಗಳ ಆರ್ಥಿಕ ನೆರವು
ಒಂಟಿಯಾಗಿ ಜೀವಿಸುವ ಮಹಿಳೆಯರಿಗೆ ಮಾಸಿಕ ರೂ.2,500/-
ಶೂನ್ಯ ಬಡ್ಡಿ ದರದಲ್ಲಿ ಪ್ರತಿ ಸ್ವಸಹಾಯ ಗುಂಪಿಗೆ ರೂ.10 ಲಕ್ಷ ದವರೆಗೆ ಸಾಲ.
ಮಹರ್ಷಿ ವಾಲ್ಮೀಕಿ – ಅಂಬೇಡ್ಕರ್ ಜನಸ್ನೇಹಿ ಯೋಜನೆಗಳು
ಪ್ರತಿ ಮನೆಗೂ 250 ಯೂನಿಟ್ ಉಚಿತ ವಿದ್ಯುತ್
ಪ.ಜಾ/ಪ.ಪಂ ಜನರಿಗೆ ಉಚಿತ ನಿವೇಶನಗಳು
ಸಫಾಯಿ ಕರ್ಮಚಾರಿಗಳಗೆ/ಪೌರ ಕಾರ್ಮಿಕರಿಗೆ ಮನೆಗಳ ನಿರ್ಮಾಣ
ಕೆ.ಆರ್.ಐ.ಈ.ಎಸ್. ವಸತಿ ಶಾಲೆಗಳಲ್ಲಿ ಆಟದ ಸೌಲಭ್ಯಗಳು
ಪ.ಜಾ ಮತ್ತು ಪ.ಪಂ.ದ ಜನರ ಭೂಮಿಗಳಿಗೆ ಪಿಟಿಸಿಎಲ್ ಕಾಯ್ದೆ ಅಡಿ ರಕ್ಷಣೆ
ಎಲ್ಲಾ ಜಿಲ್ಲೆಗಳಲ್ಲಿ ಪ.ಜಾ/ಪ.ಪಂ ವಿದ್ಯಾರ್ಥಿಗಳಗೆ ಮೆಟ್ರಿಕ್ ನಂತರ ವಸತಿ ನಿಲಯಗಳಿಗೆ ಅನುದಾನ
ವಿದ್ಯುಚ್ಛಕ್ತಿ ಚಾಲಿತ ವಾಹನ (3 ಅಥವಾ 4 ಚಕ್ರಗಳ) ಗಳನ್ನು ಖರೀದಿಸಲು ಸಹಾಯ ಧನ
ಸಂಗೊಳ್ಳಿ ರಾಯಣ್ಣ ಯುವ ಕಿರಣ
ನಿರುದ್ಯೋಗಿ ಯುವಕರಿಗೆ ಮಾಸಿಕ ರೂ.2,500/- ನಿರುದ್ಯೋಗ ಭತ್ಯೆ
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿ
ಎಲ್ಲಾ ತಾಲೂಕುಗಳಲ್ಲಿ ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯ ಮತ್ತು ಮಿನಿ ಕ್ರೀಡಾಂಗಣಗಳೊಂದಿಗೆ ಕ್ರೀಡಾ ತರಬೇತಿ ಕೇಂದ್ರಗಳ ಸ್ಥಾಪನೆ
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಶುಲ್ಕ ಪಾವತಿಸುವ ನಿಯಮ ತೆಗೆದು ಹಾಕುವುದು.
ಬಸವೇಶ್ವರ ಗೃಹ ಯೋಜನೆ
ಹೆಣ್ಣು ಮಕ್ಕಳ ಹೆಸರಿನಲ್ಲಿ ನಿವಾಸರಹಿತ ಕುಟುಂಬಗಳಿಗೆ
2 ಕೊಠಡಿಯ ನಿವಾಸ ( 2 ಬಿಎಚ್ )ಸ್ವಂತ ನಿವೇಶನ ಸ್ಥಳ ಹೊಂದಿದ ಅರ್ಹರಿಗೆ ರೂ.3 ಲಕ್ಷಗಳ ಹಣಕಾಸಿನ ನೆರವು
ಒನಕೆ ಓಬವ್ವ ಸ್ವಾಭಿಮಾನ ಯೋಜನೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ವೇತನ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ, ದುಡಿಯುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಸೌಲಭ್ಯ
ಪ್ರಮುಖ ದುಡಿಮೆ ಕ್ಷೇತ್ರ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಯ ಬದ್ಧ ಮಹಿಳಾ ಬಸ್ ಸೇವೆ. ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳಾ ಪೋಲೀಸ್ ತಂಡಗಳ ಸ್ಥಾಪನೆ
ಸರಳ ಮತ್ತು ಕೈಗೆ ಎಟಕುವ ಸಾಲಗಳ ಮೂಲಕ ಮಹಿಳೆಯರಲ್ಲಿ ಉದ್ಯಮ ಶೀಲತೆ ಪ್ರೋತ್ಸಾಹಿಸಲು ಮತ್ತು ಅವರ ಪ್ರಯತ್ನಗಳನ್ನು ಬೆಂಬಲಿಸಲು “ಮಹಿಳಾ ಉದ್ಯಮಶೀಲತಾ ಕೇಂದ್ರಗಳ ಸ್ಥಾಪನೆ” ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.1,000/- ವೇತನ ಹೆಚ್ಚಳ
ಬಸವೇಶ್ವರ ಶಿಕ್ಷಣ ಸುಧಾರಣೆ
ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಗೆ ಕೆ.ಜಿ ಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣ
ಮಾದರಿ ಭೌತಿಕ ರಚನೆ ಮತ್ತು ಸೌಕರ್ಯಗಳನ್ನೊಳಗೊಂಡ ಮಾದರಿ ವಸತಿ ನಿಲಯಗಳ ನಿರ್ಮಾನ
ಉನ್ನತ ಶಿಕ್ಷಣ ಪೂರೈಸಲು ನೆರವಾಗುವ ಬಸವಣ್ಣ ವಿದ್ಯಾರ್ಥಿ ವಸತಿ ಉನ್ನತ ಶಿಕ್ಷಣ ಪೂರೈಸಲು ನೆರವಾಗುವ ಬಸವಣ್ಣ ಕ್ರೆಡಿಟ್ ಕಾರ್ಡ್ ನಿಲಯಗಳ ನಿರ್ಮಾಣ
ವಿದೇಶಿ ವ್ಯಾಸಂಗ ಸಾಲವನ್ನು ಬಡ್ಡಿ ರಹಿತವಾಗಿ ರೂ.20 ಲಕ್ಷದವರೆಗೆ ನೆರವು
ಬಸವೇಶ್ವರ ಜಲ ಯಜ್ಞ
ಪ್ರತಿ ಎಕರೆಗೆ ನೀರಿನ ಸರಬರಾಜು, ಹೊಸ ಜಲ ಸಂಗ್ರಹಾಲಯಗಳ ನಿರ್ಮಾಣ, ಏತ ನೀರಾವರಿ ಯೋಜನೆಗಳು ಮತ್ತು ಹೊಸ ಕಾಲುವೆಗಳ ನಿರ್ಮಾಣ
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ ಮತ್ತು ಚಾಲ್ತಿಯಲ್ಲಿರುವ ಟ್ಯಾಂಕ್‌ಗಳನ್ನು ಮೇಲ್ದರ್ಜೆಗೇರಿಸುವುದು
ಬಸವೇಶ್ವರ ಆಸರೆ ಪಿಂಚಣಿ ಯೋಜನೆ
ವೃದ್ಧಾಪ್ಯ ವೇತನವನ್ನು ರೂ.1200 ರಿಂದ 1500 ರವರೆಗೆ ಹೆಚ್ಚಿಸುವುದು
ವಿಕಲ ಚೇತನರು, ಬುದ್ಧಿಮಾಂಧ್ಯರಿಗೆ ಮಾಸಿಕ ರೂ.2000/-ಗಳ ಪಿಂಚಣಿ
ಅಭಿವೃದ್ಧಿ ವಿಕೇಂದ್ರೀಕರಣ
ಭೌತಿಕ ಸಂರಚನೆಯ ಅಭಿವೃದ್ಧಿ
ವ್ಯಾಪಾರ ವಾಣಿಜ್ಯಕ್ಕೆ ಪ್ರೋತ್ಸಾಹ ಮತ್ತು ಬೆಂಬಲ
ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಬೆಂಬಲ
ದುಡಿಮೆಯನ್ನು ಸುಲಭಗೊಳಸಲು ಸುಧಾರಣಾಕ್ರಮ ಅಣ್ಣ ಬಸವಣ್ಣನವರ 12ನೆಯ ಶತಮಾನದ ಅನುಭವ ಮಂಟಪದ ಪರಿಕಲ್ಪನೆಯ ಮರುಸೃಷ್ಟಿ ಯೋಜನೆಗಾಗಿ ಒಂದು ಸಾವಿರ ಕೋಟಿ ರೂಪಾಯಿ ಮೀಸಲು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ವಿದೇಶಿ ಪ್ರವಾಸಿಗರು ಸೇರಿದಂತೆ ಎಲ್ಲಾ ಪ್ರವಾಸಿಗರ ಅತ್ಯಾಕರ್ಷಣೆ ಕೇಂದ್ರ ಸ್ಥಾಪನೆ ಹಾಗೂ ಮುಂದಿನ ಪೀಳಿಗೆಗೆ ಬಸವ ಪರಂಪರೆ ಜಾಗೃತಿ ಮೂಡಿಸುವ ಬಹು ಯೋಜನೆಗಳ ಸಂಕಲ್ಪ ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು. ಎಲ್ಲ ಸರ್ಕಾರಿ ಉಡುಪುಗಳ ತಯಾರಿಕೆಯನ್ನು ನೇಕಾರರಿಗೆ ನೀಡುವುದು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


