ಬೆಳಗಾವಿ: ಚುನಾವಣೆ ಬರುತ್ತಿದ್ದಂತೆಯೇ ಎಲ್ಲಪಕ್ಷಗಳು ತಮ್ಮದೇಯಾದ ಪ್ರಚಾರ ತಂತ್ರ ಹೆಣೆಯುವುದು ಸಾಮಾನ್ಯ. ಅದರಲ್ಲೂ ಬೆಳಗಾವಿ ರಾಜಕೀಯ ತಂತ್ರಗಾರಿಕೆ ರಾಷ್ಟ್ರಮಟ್ಟದಲ್ಲೂ ಪ್ರಸಿದ್ದ, ರಾಜ್ಯದ ರಾಜಕೀಯ ನಿರ್ಧಾರವಾಗುವುದೇ ಇಲ್ಲಿಂದ ಎಂದರು ತಪ್ಪಾಗಲಾರದು. ಈ ನಿಟ್ಟಿನಲ್ಲಿಯೇ ಎಲ್ಲ ಪಕ್ಷಗಳು ಕುಂದಾನಗರಿಯಲ್ಲಿ ಹೈಅಲರ್ಟ್ ಆಗಿದ್ದು ಭಾರತೀಯ ಜನತಾ ಪಕ್ಷದ ಕೈಗಾರಿಕಾ ಪ್ರಕೋಸ್ಟ ಸಂಚಾಲಕರಾದ ನಾಗರಾಜ್ ಶ್ರೀಕಾಂತ್ ಪಾಟೀಲ್ ಒಂದು ವಿನೋತನ ಹೊಸ ವರ್ಷದ ಮಿನಿ ಪಂಚಾಂಗ ತಯಾರಿಸುವುದರ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿ ನೀಡುವ ಕಿರು ಹೊತ್ತಿಗೆಯನ್ನು ತಯಾರಿಸಿದ್ದಾರೆ. ಈ ಕಿರು ಹೊತ್ತಿಗೆ ವಿಶೇಷವೆಂದರೆ ಭಾರತೀಯ ಜನತಾ ಪಕ್ಷದ ಘೋಷಣೆಗಳು ಸರಕಾರಗಳ ಜನಪರ ಯೋಜನೆಗಳನ್ನು ಮಾಹಿತಿ ನೀಡಲಾಗಿದೆ.
ಬಿಜೆಪಿ ಮಿನಿ ಪಂಚಾಂಗ ವನ್ನುಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಬಿಡುಗಡೆಗೊಳಿಸಿದ್ದು ಈ ಸಂದರ್ಭದಲ್ಲಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೆನಿಕೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಸಂಜಯ್ ಪಾಟೀಲ್, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


