ಬೀದರ್: ಜಿಲ್ಲಾ ಔರಾದ ತಾಲೂಕಿನ ಬೆಳಕುಣಿ (ಚೌಧರಿ) ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತಿ ಆಚರಿಸಲಾಯಿತು.
ಶಿಕ್ಷಕರಾದ ಸಂಜೀವಕುಮಾರ ಬಿರಾದಾರ ಮಾತನಾಡಿ, ಶೌರ್ಯ ಸಾಹಸ ಮತ್ತು ಸ್ವಾಭಿಮಾನದ ಕೆಚ್ಚಿಗೆ ಇನ್ನೊಂದು ಹೆಸರಾಗಿದ್ದ ಭಾರತೀಯರ ಹೃದಯ ಸಾಮ್ರಾಟ ಅಪ್ರತಿಮ ಛಲದ ದೇಶ ಕಂಡ ಅಪ್ರತಿಮ ಶೂರ ಮಹಾಕ್ಷತ್ರಿಯ ಚತುರಮತಿ ಆಡಳಿತಗಾರ, ಹೆಸರುವಾಸಿಯಾದ ಛತ್ರಪತಿ ಶಿವಾಜಿ ಮಹಾರಾಜರು, ಯುದ್ಧ ಚಾಕಚಕ್ಯತೆ ಆಡಳಿತಾತ್ಮಕ ಕೌಶಲ್ಯಕ್ಕೆ ಸ್ವಾಭಿಮಾನಿ ಕನಸು ಕಂಡ ಶ್ರೇಷ್ಠ ಆಡಳಿತಗಾರರಾದ ಹೆಸರಾದವರು ತಿಳಿಸಿದರು.
ಈ ಸಮಯದಲ್ಲಿ ಪ್ರಾಂಶುಪಾಲರಾದ ಉಮಾಕಾಂತ ಚೋಪಡೇ, ಶಿಕ್ಷಕರಾದ ಆಶೋಕ್ ಜಾಧವ, ರಂಜನ ಗಾಯಕ್ವಾಡ್, ಮುತ್ತಮ್ಮ ಹಾಗೂ ಶಾಲೆಯ ಎಸ್.ಡಿ ಎಮ್ ಸಿ. ಅಧ್ಯಕ್ಷರಾದ ಎಮ್.ಡಿ.ನಯೂಮ್ ಉಪಸ್ಥಿತರಿದ್ದರು .
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4