ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು,ಇತ್ತ ಸುವರ್ಣಸೌಧದ ಹೊರಗೆ, ಪ್ರತಿಭಟನಾ ಸ್ಥಳ ಸೇರಿದಂತೆ ಎಲ್ಲೆಡೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಇನ್ನು ಅಧಿವೇಶನಕ್ಕೆ ಸೂಕ್ತ ಸಮಯಕ್ಕೆ ಆಗಮಿಸುವ ಶಾಸಕರುಗಳಿಗೆ ಕಾಫಿ ಕಪ್ ಗಿಫ್ಟ್ ಕೊಡಲಾಗುತ್ತಿದೆ. ಈ ಬಗ್ಗೆ ಸ್ವೀಕರ್ ಯುಟಿ ಖಾದರ್ ಮಾಹಿತಿ ನೀಡಿದ್ದಾರೆ.
ಕಳೆದ ಅಧಿವೇಶದನಲ್ಲಿ ಮೊದಲ ಬೇಗ ಬಂದವರ ಹೆಸರನ್ನ ಕೂಗಿ ಹೇಳುತ್ತೇವೆ ಎಂದು ಹೇಳಿದ್ವಿ. ಅಂತಿಮವಾಗಿ ಯಾರು ಎಷ್ಟು ದಿನ ಬಂದಿದ್ದಾರೆ ಅವರಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ವಿ. ಕಳೆದ ಅಧಿವೇಶನದಲ್ಲಿ ಕೆಲವರು ಒಂದು ದಿನ, ಮತ್ತೆ ಕೆಲವರು ಐದು ದಿನ, ಹಲವರು ಹತ್ತು ದಿನವೂ ಬಂದಿದ್ದಾರೆ. ಇದಕ್ಕೆ ಅನುಗುಣವಾಗಿ ಇವರಿಗೆ ಪ್ರೋತ್ಸಾಹ ನೀಡಲು, ಗುರುತಿಸಿಕೊಳ್ಳಲು ಪ್ರಶಸ್ತಿ ನೀಡುತ್ತಿದ್ದೇವೆ. ತಡವಾಗಿ ಬರುವವರಿಗೆ ಶಿಕ್ಷೆ ವಿಧಿಸುವುದಕ್ಕಿಂತ ಈ ರೀತಿ ಉಡುಗೊರೆ ಕೊಟ್ಟು ಬೇಗ ಬರುವಂತೆ ಪ್ರೇರಣ ಮಾಡುತ್ತೇವೆ ಎಂದರು.


