ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಅಧಿಕವಾಗಿದ್ದು, ಹಲವು ಜೀವಗಳನ್ನು ಈ ಗುಂಡಿ ಬಲಿ ಪಡೆದಿದೆ. ಎಷ್ಟು ಜನರು ಜೀವತೆತ್ತರು ಸಹ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿಲ್ಲ.
ರಸ್ತೆ ಗುಂಡಿ ಬಗ್ಗೆ ಬಾಲಕಿ ವಿಡಿಯೋ ಮಾಡಿದ್ದು, ಅಧಿಕಾರಿಗಳಿಗೆ ಪುಟಾಣಿ ಚಳಿಬಿಡಿಸಿದ್ದಾಳೆ. ರಸ್ತೆ ಮಾಡಿ ಒಂದು ತಿಂಗಳು ಆಯ್ತು. ಮತ್ತೆ ರಸ್ತೆಯಲ್ಲಿ ಹೊಂಡ ಮಾಡ್ತಿದ್ದಾರೆ. ನಮ್ಮಗೆಲ್ಲ ಎಷ್ಟು ಕಷ್ಟ ಆಗ್ತಿದೆ ನೋಡಿ ಸ್ವಲ್ಪ ಎಂದು ಪುಟಾನಿ ವಿಡಿಯೋದಲ್ಲಿ ಮಾತನಾಡಿದ್ದಾಳೆ.
ಮುಖ್ಯಮಂತ್ರಿಗಳೇ ಈ ಕಡೆ ನೋಡಿ ಸ್ವಲ್ಪ ಎಂದು ಮುಖ್ಯ ಮಂತ್ರಿಗಳಿಗೆ ಈಕೆ ಪ್ರಶ್ನೆ ಮಾಡಿದ್ದಾಳೆ. ರಸ್ತೆ ಮಾಡುವುದು ನೀವೇ? ಹೊಂಡ ಮಾಡೋದು ನೀವೇ ಎಂದು ಮುಖ್ಯಮಂತ್ರಿಗಳ ವಿರುದ್ಧ ಬಾಲಕಿ ಆಕ್ರೋಶ ಹೊರ ಹಾಕಿದ್ದಾಳೆ. ಈಗ ಆ ಪುಟ್ಟ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy