ಬೆಂಗಳೂರು: ಸಂಪಂಗಿರಾಮನಗರ ಐಡಿಬಿಐ ಬ್ಯಾಂಕ್‌ನ ಮಿಷನ್ ರಸ್ತೆ ಶಾಖೆಯ ಗ್ರಾಹಕ ಸಂಪರ್ಕ ವ್ಯವಸ್ಥಾಪಕಿ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳು ಹಾಗೂ ಎಲ್‌ಐಸಿ ಬಾಂಡ್‌ಗಳಿಗೆ (LIC Bond) ₹4.92 ಕೋಟಿ ಹಣವನ್ನು ವರ್ಗಾವಣೆ ಮಾಡಿ ವಂಚಿಸಿದ್ದ ಕಾರಣ ಸಜೀಲಾ ಗುರುಮೂರ್ತಿ (34) ಅವರನ್ನು ಸಂಪಂಗಿರಾಮನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈಕೆ ಮಿಷನ್ ರಸ್ತೆಯ ಐಡಿಬಿಐ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದಳು. ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವಳಾದ ಈಕೆ ಹುನಸೆಮಾರೇನಹಳ್ಳಿಯ ಭಾರತಿನಗರದಲ್ಲಿ ವಾಸವಾಗಿದ್ದಳು. ಪೊಲೀಸರು ಆರೋಪಿ ಕೆಲಸ ಮಾಡುತ್ತಿದ್ದ ಮಿಷನ್ ರಸ್ತೆಯ ಶಾಖೆಯ ಕಂಪ್ಯೂಟರ್ ಹಾಗೂ 23 ಲಕ್ಷ ಮೊತ್ತ ಒಂದು ಬಾಂಡ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಹುದ್ದೆಯ ಲಾಭವನ್ನು ಬಳಸಿಕೊಂಡು ಗ್ರಾಹಕರ ಅನುಮತಿ ಇಲ್ಲದೆ 4.92 ಕೋಟಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ (Transfer) ಮಾಡಿದ್ದಾಳೆ ಎನ್ನಲಾಗಿದೆ. ಆರೋಪಿತೆ ಗ್ರಾಹಕರ ಅನುಮತಿ ಇಲ್ಲದೆ, ಅವರ ಖಾತೆಯಿಂದ ಹಣ ತೆಗೆದು ವಿಮಾ ಬಾಂಡ್ಗಳ ಮೇಲೆ ಹೂಡಿದ್ದಾರೆ.
ಆರೋಪಿತೆ ಮೇಲೆ ಉಪ್ಪಾರಪೇಟೆ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು ಗಾಂಧಿನಗರದ ಐಡಿಬಿಐ ಬ್ರಾಂಚ್ನಲ್ಲೂ ಕೋಟಿ ಕೋಟಿ ದೋಖಾ ಮಾಡಿದ್ದಾಳೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


