nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಧುಗಿರಿ:  ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ

    November 17, 2025

    ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ

    November 17, 2025

    ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ

    November 17, 2025
    Facebook Twitter Instagram
    ಟ್ರೆಂಡಿಂಗ್
    • ಮಧುಗಿರಿ:  ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
    • ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
    • ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
    • ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
    • ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ
    • ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್
    • ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್
    • ಆಗ್ನೆಯ ಪದವೀಧರರ ಮತದಾರರರ ನೋಂದಣಿ: ನ.25ರಿಂದ ಡಿ.10ರವರೆಗೆ ಮುಂದೂಡಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆಂಗಳೂರಿನ ಇತಿಹಾಸ ಗಣರಾಜ್ಯೋತ್ಸವ ದಿನ ಲಾಲ್‌ ಬಾಗ್ ಫಲಪುಷ್ಪ ಪ್ರದರ್ಶನ
    ರಾಜ್ಯ ಸುದ್ದಿ January 9, 2023

    ಬೆಂಗಳೂರಿನ ಇತಿಹಾಸ ಗಣರಾಜ್ಯೋತ್ಸವ ದಿನ ಲಾಲ್‌ ಬಾಗ್ ಫಲಪುಷ್ಪ ಪ್ರದರ್ಶನ

    By adminJanuary 9, 2023No Comments2 Mins Read
    bengalore

    ಈ ವರ್ಷ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ವಿಶ್ವವಿಖ್ಯಾತ ಲಾಲ್‌ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ 15 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುವ ನೀರಿಕ್ಷೆ ಇದೆ. ಕೋವಿಡ್ ಸಾಂಕ್ರಾಮಿಕ ಸಂಭವಿಸಿದ ನಂತರದಲ್ಲಿ ೨೦೨೦, ೨೦೨೧ರಲ್ಲಿ ಫಲಪುಷ್ಪ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು.

    ಆದರೆ ೨೦೨೨ರ ಸ್ವಾತಂತ್ರ್ಯ ದಿನಾಚರಣೆಯಂದು ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ದಾಖಲೆ ಸಂಖ್ಯೆಯಲ್ಲಿ ಜನರು ಪ್ರದರ್ಶನಕ್ಕೆ ಆಗಮಿಸಿದರು. ಈ ವರ್ಷ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಲಾಲ್‌ ಬಾಗ್‌ ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನ ಜನವರಿ ೧೯ ಹಾಗೂ ಜನವರಿ ೨೯ರ ನಡುವೆ ನಡೆಯಲಿದ್ದು, ದೊಡ್ಡ ಪ್ರಮಾಣದ ಜನರನ್ನು ಆಕರ್ಷಿಸುವ ನಿರೀಕ್ಷೆಯಿದೆ.


    Provided by
    Provided by

    ಈ ಬಾರಿ ಫಲಪುಷ್ಪ ಪ್ರದರ್ಶನ ‘ಬೆಂಗಳೂರಿನ ಇತಿಹಾಸ’ದ ವಿಷಯವನ್ನು ಆಧರಿಸಿರುತ್ತದೆ. ಬೆಂಗಳೂರಿನ ವಿಕಸನವನ್ನು ಪ್ರತಿಬಿಂಬಿಸಲಿರುವ ಈ ಪ್ರದರ್ಶನದಲ್ಲಿ ಹಳೆಯ ಸಾಂಪ್ರದಾಯಿಕ ಬೆಂಗಳೂರು ನಗರದಿಂದ ಹಿಡಿದು ಈವರೆಗಿನ ಬೆಳವಣಿಗಗಳು ಪುಷ್ಪ ಪ್ರದರ್ಶನದಲ್ಲಿ ವಿವಿಧ ಮಾದರಿಗಳ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ.

    “ಬೆಂಗಳೂರು ಮಹಾನಗರದ ಸೃಷ್ಟಿ ಸುಮಾರು ೧,೫೦೦ ವರ್ಷಗಳಷ್ಟು ಪ್ರಾಚೀನವಾಗಿದೆ. ಬೇಗೂರಿನಲ್ಲಿ ಕಂಡು ಬಂದಂತಹ ಮೊದಲ ಶಾಸನದಲ್ಲಿ ಬೆಂಗಳೂರಿನ ಉಲ್ಲೇಖವಿದ್ದು, ಆದಾದ ನಂತರದಲ್ಲಿ ಚೋಳರ ಸಾಮ್ರಾಜ್ಯ ಹಾಗೂ ಕೆಂಪೇಗೌಡ ೧ ಆಧುನಿಕ ಬೆಂಗಳೂರನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು,” ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಮುಂದುವರೆದು, ಮರಾಠರ ಉದಯ, ಒಡೆಯರ್ ರಾಜರ ಉದಯ, ಕೃಷ್ಣರಾಜ ಒಡೆಯರ್ ಹಾಗೂ ಹೈದರ್ ಆಲಿ ಸಾಮ್ರಾಜ್ಯಗಳ ಆಳ್ವಿಕೆಯ ಸಮಯದ ವಿವಿಧ ಮಾದರಿಗಳನ್ನು ಪ್ರದರ್ಶನ ಒಳಗೊಳ್ಳಲಿದೆ. “ಟಿಪು ಸುಲ್ತಾನ್ ಆಳ್ವಿಕೆಯ ಸಮಯದಲ್ಲಿ ಬೆಂಗಳೂರು ನಗರ ಯಾವ ರೀತಿ ವಿಕಾಸಗೊಂಡಿತು ಎನ್ನುವುದರಿಂದ ಹಿಡಿದು ಮೈಸೂರಿನ ಒಡೆಯರ್ ಸಾಮ್ರಾಜ್ಯದವರೆಗಿನ ಬೆಂಗಳೂರು ನಗರದ ವಿಕಸನವನ್ನು ವಿವಿಧ ಆಕರ್ಷಕ ಫಲಪುಷ್ಪ ಮಾದರಿಗಳ ಮೂಲಕ ಪ್ರದರ್ಶಿಸಲಾಗುವುದು.

    ಅದಾದ ನಂತರ, ೧೯೪೭ರವರೆಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಆಳ್ವಿಕೆ ಅಡಿಯಲ್ಲಿ ಬೆಂಗಳೂರಿನ ಅಭಿವೃದ್ಧಿ, ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಹಾಗೂ ಕಾಲಕ್ರಮೇಣ ಬೆಂಗಳೂರು ನಗರ ಯಾವ ರೀತಿ ಸಿಲಿಕಾನ್ ಸಿಟಿಯಾಗಿ ಅಭಿವೃದ್ಧಿಯಾಯಿತು ಎಂದು ಪ್ರದರ್ಶನದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತದೆ,” ಎಂದು ಅವರು ವಿವರಿಸಿದರು.

    ಬೆಂಗಳೂರು ನಗರ ಬಾಹ್ಯಾಕಾಶ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿಯೂ ಸಹ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದು, ಫಲಪುಷ್ಪ ಪ್ರದರ್ಶನದಲ್ಲಿ ಈ ಕುರಿತೂ ಸಹ ಮಾದರಿಗಳು ಇರಲಿವೆ. ಈ ಪೈಕಿ ಕೆಲವು ಪರಿಕಲ್ಪನೆಗಳನ್ನು ಪುಷ್ಪ ಮಾದರಿಗಳು ಹಾಗೂ ಕೆಲವನ್ನು ಫೈಬರ್ ಮಾದರಿಗಳ ರೂಪದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

    “ಪ್ರಸ್ತುತ ಪ್ರದರ್ಶನಕ್ಕೆ ಸಂಬಂಧಪಟ್ಟಂತೆ ನಾವು ಯಾವ ರೀತಿಯ ಪುಷ್ಪಗಳಿರಬೇಕೆಂದು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಕೆಲವು ಬಹಳ ಆಸಕ್ತಿ ಹುಟ್ಟಿಸುವಂತಹ ತಳಿಗಳಂತು ಇದ್ದೇ ಇರುತ್ತವೆ. ಇನ್ನು ಮೂರು ದಿನಗಳಲ್ಲಿ ನಾವು ಈ ಕುರಿತು ಅಂತಿಮ ನಿರ್ಧಾರಕ್ಕೆ ಬರುತ್ತೇವೆ,” ಎಂದರು.

    ತೋಟಗಾರಿಕೆ ಇಲಾಖೆಯು ಈ ಬಾರಿ ಬೆಂಗಳೂರಿನ ಇತಿಹಾಸದ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಪ್ರದರ್ಶನದಲ್ಲಿ ಅಳವಡಿಸುವ ಹಾಗೂ ಈ ವಿಷಯದ ಬಗ್ಗೆ ಹಲವು ಪ್ಯಾನೆಲ್ ಚರ್ಚೆಗಳನ್ನೂ ಸಹ ಆಯೋಜಿಸಲು ಆಲೋಚಿಸುತ್ತಿದೆಯಂತೆ.

    ಈ ಬಾರಿ ನವ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಂದು ನಡೆಯಲಿರುವ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಕರ್ನಾಟಕದ ಸ್ತಬ್ದಚಿತ್ರ ಆಯ್ಕೆ ಆಗದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ನೊಡಲ್ ಅಧಿಕಾರಿ ಸಿ.ಆರ್. ನವಿನ್ ಅವರು, “ಭಾರತ ಸರ್ಕಾರ, ಕಳೆದ ಎಂಟು ವರ್ಷಗಳಲ್ಲಿ ಗಣರಾಜ್ಯೋತ್ಸವ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಭಾಗವಹಿಸದೇ ಇದ್ದಂತಹ ರಾಜ್ಯಗಳಿಗೆ ಈ ಬಾರಿ ಒಂದು ಅವಕಾಶವನ್ನು ಕೊಡಲು ನಿರ್ಧರಿಸಿದೆ. ಹಾಗಾಗಿ, ಕರ್ನಾಟಕ ರಾಜ್ಯಕ್ಕೆ ಈ ಬಾರಿ ಸ್ಥಾನ ಸಿಕ್ಕಿಲ್ಲ,” ಎಂದು ತಿಳಿಸಿದರು.

    ಮೇಲಾಗಿ, ಕಳೆದ ವರ್ಷಗಳಲ್ಲಿ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಂತಹ ರಾಜ್ಯಗಳ ಪಟ್ಟಿ ಹಾಗೂ ಈ ಬಾರಿ ಆಯ್ಕೆಯಾಗಿರುವ ರಾಜ್ಯಗಳ ಪಟ್ಟಿಯನ್ನು ಹೊಲಿಕೆ ಮಾಡಿ ನೋಡಿದರೆ, ೨೦೨೨ರಲ್ಲಿ ಭಾಗವಹಿಸಿದ್ದಂತಹ ಮೂರು ಪ್ರಶಸ್ತಿ ವಿಜೇತ ರಾಜ್ಯಗಳಿಗೂ ಸಹ ಈ ಬಾರಿ ಸ್ಥಾನ ಲಭಿಸಿಲ್ಲ,” ಎಂದರು.

    ಸುದ್ದಿ ಮಾಹಿತಿ: ಬೆಂಗಳೂರು ಮಿರರ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್

    November 16, 2025

    ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ

    November 14, 2025

    ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ:  ಸಿಎಂ ಸಿದ್ದರಾಮಯ್ಯ

    November 8, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಮಧುಗಿರಿ:  ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ

    November 17, 2025

    ಮಧುಗಿರಿ:  ಮಧುಗಿರಿ ಪಟ್ಟಣದಲ್ಲಿ ಸೊಳ್ಳೆಯ ಕಾಟಕ್ಕೆ ಜನ ಬೇಸತ್ತಿದ್ದಾರೆ. ಪಟ್ಟಣದ ಎಲ್ಲೆಡೆಗಳಲ್ಲಿ  ಸೊಳ್ಳೆಗಳ ವಿಪರೀತ ಕಾಟಕ್ಕೆ ಜನ ಬಳಲಿ ಬೆಂಡಾಗಿದ್ದಾರೆ.…

    ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ

    November 17, 2025

    ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ

    November 17, 2025

    ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ

    November 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.