ಬೆಂಗಳೂರು ಮಹಿಳೆಯರೆ ಎಚ್ಚರವಾಗಿರಿ. ಲೇಡಿಸ್ ಪಿಜಿಗಳನ್ನೇ ಹುಡುಕಿ ಹೋಗುವ ಈ ಕಾಮುಕ ಕದ್ದು ಮುಚ್ಚಿ ಸ್ನಾನ ಮಾಡುವ ವಿಡಿಯೋ ರೆಕಾರ್ಡ್ ಮಾಡುತ್ತಾನೆ. ಯುವತಿಯರ ಸ್ನಾನದ ವಿಡಿಯೋ ತೆಗಿಯುತಿದ್ದಂತೆ ರೆಡ್ ಹ್ಯಾಂಡ್ ಆಗಿ
ಸಿಕ್ಕಿಬಿದ್ದಿದ್ದಾನೆ.
ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕನಾಗಿದ್ದು, ಮಹದೇವಪುರ ಹೂಡಿಯಲ್ಲಿರುವ ಪಿಜಿನಲ್ಲಿ ವಾಸವಾಗಿದ್ದ ಅಶೋಕ್, ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ. ಅಶೋಕ್ ವಾಸ ಮಾಡ್ತಿದ್ದ ಪಿಜಿ ಮುಂಭಾಗದಲ್ಲೇ ಇದ್ದ, ಲೇಡಿಸ್ ಪಿಜಿಯಲ್ಲಿನ ಸ್ನಾನದ ರೂಂ ಅನ್ನೇ ನೋಡುತ್ತಾ ಕುಳಿತಿದ್ದ ಅಶೋಕ್, ಯುವತಿಯರು ಸ್ನಾನ ಮಾಡಲು ಬರ್ತಿದ್ದಂತೆ ಅಲರ್ಟ್ ಆಗುತ್ತಿದ್ದ. ಸ್ನಾನ ಮಾಡ್ತಿದ್ದ ವಿಡಿಯೋ ವೆಂಟಿಲೇಷನ್ ಮೂಲಕ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದನು.
ಕಳೆದ ಜೂನ್ 21ರಂದು ಸಿಕ್ಕಿಬಿದ್ದ ಆರೋಪಿ ಅಶೋಕ್, ವೆಂಟಿಲೇಷನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿಕೊಳ್ತಿದ್ದ. ಆರೋಪಿಯನ್ನು ಹಿಡಿದ ಸ್ಥಳೀಯರು ಮಹದೇವಪುರ ಪೊಲೀಸರಿಗೆ ಒಪ್ಪಿಸಿದರು. ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ, ಅಶೋಕ್ ಮೊಬೈಲ್ ನಲ್ಲಿ 7 ಯುವತಿಯರ ಸ್ನಾನದ ವಿಡಿಯೋ ಪತ್ತೆಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


