nammatumakuru

    Subscribe to Updates

    Get the latest creative news from FooBar about art, design and business.

    What's Hot

    ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಎಲ್ಲೆಡೆ ಬಂದೋಬಸ್ತ್, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ

    March 28, 2026

    2030ಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಶಕ್ತ: ಕೇಂದ್ರ ಸಚಿವ ವಿ.ಸೋಮಣ್ಣ

    March 28, 2026

    SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: ಒಟ್ಟು ಅಂಕ 625 ರಿಂದ 525ಕ್ಕೆ ಇಳಿಕೆ, ತೃತೀಯ ಭಾಷೆಗೆ ಇನ್ನು ಗ್ರೇಡ್ ಮಾತ್ರ!

    March 28, 2026
    Facebook Twitter Instagram
    ಟ್ರೆಂಡಿಂಗ್
    • ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಎಲ್ಲೆಡೆ ಬಂದೋಬಸ್ತ್, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ
    • 2030ಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಶಕ್ತ: ಕೇಂದ್ರ ಸಚಿವ ವಿ.ಸೋಮಣ್ಣ
    • SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: ಒಟ್ಟು ಅಂಕ 625 ರಿಂದ 525ಕ್ಕೆ ಇಳಿಕೆ, ತೃತೀಯ ಭಾಷೆಗೆ ಇನ್ನು ಗ್ರೇಡ್ ಮಾತ್ರ!
    • ಭ್ರಷ್ಟಾಚಾರದ ನಡುವೆ ಅಭಿವೃದ್ಧಿ ಹುಡುಕುವ ಸ್ಥಿತಿ ಬಂದಿದೆ: ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ
    • ಮುಸ್ಲಿಮರ ಮೀಸಲಾತಿ ಕಿತ್ತು ದಲಿತರಿಗೆ ನೀಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹ
    • ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ
    • ಸಾರ್ವಜನಿಕರ ಮೇಲೆ ಜೇನುಹುಳು ದಾಳಿ: ತಡೆ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ
    • ಪಾವಗಡದಲ್ಲಿ ಜನ ಸಂಪರ್ಕ ಸಭೆ: ಬೆಟ್ಟಗಳಲ್ಲಿ ಮಣ್ಣು ಅಗೆತ: ಕ್ರಮಕ್ಕೆ ಸೂಚನೆ, ಸಾರ್ವಜನಿಕರ ಅಹವಾಲುಗಳೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿಕ್ಷಣ ಸಚಿವರ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದು ಖಂಡನೀಯ: ಬಿಜೆಪಿ ಪ್ರತಿಭಟನೆ
    ಗುಬ್ಬಿ June 3, 2022

    ಶಿಕ್ಷಣ ಸಚಿವರ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದು ಖಂಡನೀಯ: ಬಿಜೆಪಿ ಪ್ರತಿಭಟನೆ

    By adminJune 3, 2022No Comments2 Mins Read

    ಗುಬ್ಬಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ತಿಪಟೂರು ಮನೆ ಮೇಲೆ ಕಾಂಗ್ರೆಸ್ ಪಕ್ಷದ ಎನ್  ಎಸ್  ಯು ಐ ಘಟಕ ದಾಳಿ ಮಾಡಿ ಬೆಂಕಿ ಹಚ್ಚಲು ಮುಂದಾಗಿದ್ದು ಖಂಡನೀಯ. ಈ ಘಟನೆಗೆ ಕಾರಣರಾದ ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಘಟಕ  ಗುರುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ಎನ್ ಎಸ್ ಯು ಐ ಘಟಕದ ದುರ್ವತನೆ ಖಂಡಿಸಿ ಧರಣಿ ನಡೆಸಿದರು. ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನ ಈ ಘಟಕ ಬೇರೆ ಜಿಲ್ಲೆಯಿಂದ ರೌಡಿಗಳನ್ನು ಕರೆಸಿ ಶಿಕ್ಷಣ ಸಚಿವರ ಮನೆಗೆ ಬೆಂಕಿ ಇಡುವ ಕುತಂತ್ರ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರ ಕೆಟ್ಟ ನಡವಳಿಕೆ ಎನಿಸಿದೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿದರು


    Provided by
    Provided by

    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ ಮಾತನಾಡಿ ಧರಣಿ ಮಾಡುವ ನೆಪದಲ್ಲಿ ಸಚಿವರ ಮನೆ ಮೇಲೆ ದಾಳಿ ಮಾಡಿದ್ದು ಖಂಡನೀಯ. ಈ ರೀತಿ ಮನೆಗೆ ಬಂದು ದುಂಡಾವರ್ತನೆ ತೋರಿದ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾದ ಎನ್ ಎಸ್ ಯು ಐ ಘಟಕ ಸಂಪೂರ್ಣ ಕಾಂಗ್ರೆಸ್ ಆಣತಿಯಂತೆ ಕೆಲಸ ಮಾಡುತ್ತದೆ. ಮನೆಗೆ ಬೆಂಕಿ ಹಚ್ಚುವ ಕೆಲಸ ಈ ಹಿಂದೆ ನಡೆದ ಕೆಜಿ ಹಳ್ಳಿ ಪ್ರಕರಣ ಸಾಕ್ಷಿಯಾಗಿದೆ. ಈಗ ಮತ್ತೊಂದು ಘೋರ ಘಟನೆಗೆ ಮುಂದಾದ ಈ ಪ್ರತಿಭಟನಾಕಾರರ ಮನಸ್ಥಿತಿ ಅರಿತುಕೊಳ್ಳಬಹುದಾಗಿದೆ ಎಂದರು

    ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಸಚಿವರ ಮನೆಗೆ ಮುತ್ತಿಗೆ ಮಾಡುವ ಪ್ರತಿಭಟನಾಕಾರರು ಹೊರ ಜಿಲ್ಲೆಯವರು ಎನ್ನಲಾಗಿದೆ. ಈ ಧರಣಿಯ ನೆವದಲ್ಲಿ ದಾಳಿಗೆ ಪೂರ್ವ ನಿಯೋಜಿತ ತಂತ್ರ ಬಳಸಲಾಗಿದೆ. ಈ ಮಟ್ಟದ ಅಪಾಯಕಾರಿ ಕೆಲಸ ಮಾಡಿದ ಸಂಘಟನೆಯನ್ನು ವಜಾಗೊಳಿಸಬೇಕು. ಜೊತೆಗೆ ಕಾರಣಕರ್ತರಾದವರನ್ನು ಬಂಧಿಸಿ ಶಿಕ್ಷಿಸಬೇಕು. ತನಿಖೆಗೆ ಒಳಪಡಿಸಿ ಈ ಕೃತ್ಯದ ಹಿಂದಿದ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

    ನಂತರ ತಹಸೀಲ್ದಾರ್ ಬಿ.ಆರತಿ ಅವರಿಗೆ ಮನವಿ ನೀಡಿದ ಬಿಜೆಪಿಯ ಎಲ್ಲಾ ಮುಖಂಡರು ಸಚಿವರ ಮನೆ ಮೇಲಿನ ದಾಳಿ ಪ್ರಕರಣ ಸೂಕ್ತ ತನಿಖೆಗೆ ಸರ್ಕಾರಕ್ಕೆ ಒತ್ತಾಯಿಸಿದ ಮನವಿ ಕೂಡಲೇ ತಲುಪಿಸಲು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪ ಸ್ವಾಮಿ.ಬಿಜೆಪಿ ಮುಖಂಡ ದಿಲೀಪ್ ಕುಮಾರ್.ಅ.ನಾ.ಲಿಂಗಪ್ಪ. ಭರತ್.ಪ್ರಮೋದ್. ಶಿವಕುಮಾರ್. ಇತರ ಮುಖಂಡರು ಹಾಜರಿದ್ದರು.

    ವರದಿ: ಮಂಜುನಾಥ್,  ಗುಬ್ಬಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಗುಬ್ಬಿ: ಆಟೊ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರ ಆಕ್ರೋಶ; ಬಂಕ್ ಮುಂದೆ ಪ್ರತಿಭಟನೆ

    March 24, 2026

    ಗುಬ್ಬಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ರೈತರಿಂದ ಪ್ರತಿಭಟನೆ

    March 10, 2026

    ಬಜೆಟ್‌ ನಲ್ಲಿ ಜಿಲ್ಲೆಗೆ ನಿರಾಶೆ: ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ

    March 8, 2026

    Leave A Reply Cancel Reply

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಎಲ್ಲೆಡೆ ಬಂದೋಬಸ್ತ್, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ

    March 28, 2026

    ತುಮಕೂರು : ಏಪ್ರಿಲ್ 1ರಂದು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದೌಪತಿ…

    2030ಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಶಕ್ತ: ಕೇಂದ್ರ ಸಚಿವ ವಿ.ಸೋಮಣ್ಣ

    March 28, 2026

    SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: ಒಟ್ಟು ಅಂಕ 625 ರಿಂದ 525ಕ್ಕೆ ಇಳಿಕೆ, ತೃತೀಯ ಭಾಷೆಗೆ ಇನ್ನು ಗ್ರೇಡ್ ಮಾತ್ರ!

    March 28, 2026

    ಭ್ರಷ್ಟಾಚಾರದ ನಡುವೆ ಅಭಿವೃದ್ಧಿ ಹುಡುಕುವ ಸ್ಥಿತಿ ಬಂದಿದೆ: ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ

    March 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.