ಕೊರಟಗೆರೆ: ಬಿಇಓ ನಟರಾಜು ಅವರ ಕಚೇರಿಗೆ ನುಗ್ಗಿ ಧಮ್ಕಿ ಹಾಕಿರುವ ಆರೋಪದಲ್ಲಿ ಪ್ರಭಾರ ಮುಖ್ಯಶಿಕ್ಷಕ ದೇವರಾಜಯ್ಯ ಸೇರಿ 8 ಜನರ ಮೇಲೆ ಕೊರಟಗೆರೆ ಠಾಣೆಗೆ ಬಿಇಓ ನಟರಾಜು ದೂರು ನೀಡಿದ್ದಾರೆ.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಇಓ ನಟರಾಜು ೀ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿಯ ಕೆರೆಯಾಗಲಹಳ್ಳಿ ಪ್ರಾಥಮಿಕ ಪಾಠಶಾಲೆಯ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯನನ್ನು ಕರ್ತವ್ಯಲೋಪ, ಅನಧಿಕೃತ ಗೈರು, ಬೇಜವಾಬ್ದಾರಿ ವರದಿ ಆಧರಿಸಿ ಅಮಾನತು ಮಾಡಲಾಗಿದೆ.
ಈ ಸಂಬಂಧ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯ ಮತ್ತು ಇತರ 8 ಮಂದಿ ಬಿಇಓ ಕಚೇರಿಗೆ ನುಗ್ಗಿ, ಧಿಗ್ಭಂಧನ ಹಾಕಿ ಅಮಾನತು ರದ್ದುಪಡಿಸಿ ಅದೇ ಶಾಲೆಗೆ ಮತ್ತೆ ನೇಮಕ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲದೇ ಮೇ 6 ರಂದು ವರ್ಗಾವಣೆ ಆಗ್ತಿಯಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಿಇಓ ನಟರಾಜು ಆರೋಪಿಸಿದ್ದಾರೆ.
ಕರ್ತವ್ಯಲೋಪ, ಅನಧಿಕೃತ ಗೈರು, ಬೇಜವಾಬ್ದಾರಿ ವರದಿ ಆಧರಿಸಿ ಪ್ರಭಾರ ಮುಖ್ಯಶಿಕ್ಷಕ ದೇವರಾಜಯ್ಯರನ್ನು ಅಮಾನತು ಮಾಡಲಾಗಿತ್ತು. ಈ ಹಿಂದೆಯೂ ದೇವರಾಜಯ್ಯ ಪೋಕ್ಸೋ ಪ್ರಕರಣ, ಕರ್ತವ್ಯಲೋಪ ಆರೋಪದಡಿ ಅಮಾನತು ಆಗಿದ್ದರು. ಇದೀಗ ಮತ್ತೆ ಕರ್ತವ್ಯಲೋಪದ ಅಡಿಯಲ್ಲಿ ಅಮಾನತು ಆಗಿದ್ದಾರೆ ಎಂದು ಬಿಇಓ ನಟರಾಜು ತಿಳಿಸಿದ್ದಾರೆ.
ಪ್ರಭಾರ ಮುಖ್ಯಶಿಕ್ಷಕ ದೇವರಾಜಯ್ಯ ಅವರನ್ನು ಕೊರಟಗೆರೆ ಕ್ಷೇತ್ರದಿಂದಲೇ ವರ್ಗಾವಣೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ದೇವರಾಜಯ್ಯ ಸೇರಿ 8 ಜನರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಅಧಿಕಾರಿಗಳು ಆಗ್ರಹಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW