ಕೊರಟಗೆರೆ : ಬೆಸ್ಕಾಂ ವತಿಯಿಂದ ಪ್ರತಿ ತಿಂಗಳ ಮೂರನೇ ಶನಿವಾರದಲ್ಲಿ ನಡೆಯುವ ಗ್ರಾಹಕರ ಸಂವಾದ ಸಭೆಯು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು..
ಸಭೆಯಲ್ಲಿ ಚನ್ನರಾಯನದುರ್ಗ ಹೋಬಳಿಯ ನೇಗಲಾಲ ಮಜರೆ ಗ್ರಾಮವಾದ ಅನುಪಲು ಮತ್ತು ಮಾರಿಪಾಳ್ಯ ಹಾಗೂ ಮರೇನಾಯಕನಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆಯ ಕುರಿತು ಚರ್ಚೆ ನಡೆಸಲಾಯಿತು..
ಮರೇನಾಯಕನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿನ ಬೀದಿ ದೀಪದ ವಿದ್ಯುತ್ ಕಂಬಗಳು ದುರಸ್ತಿ ಕೆಲಸ ಮತ್ತು ಕೆಲವು ವಿದ್ಯುತ್ ಕಂಬಗಳು ತುಂಬಾ ವರ್ಷಗಳಿಂದ ಬಾಗಿದ್ದು ಅವುಗಳನ್ನು ತಗೆದು ಹೊಸ ಕಂಬ ಹಾಕುವಂತೆ ಮನವಿ ಮಾಡಲಾಗಿದೆ.
ಅನುಪಲು ಗ್ರಾಮದ ಅಶೋಕ್ ಮನೆಯಿಂದ ನಾಗರಾಜುರವರ ಮನೆಯವರೆಗೆ ಬೀದಿ ದೀಪದ ವಿದ್ಯುತ್ ಕಂಬಗಳನ್ನು ಅಳವಡಿಸಲು ಹೊಸ ಯೋಜನೆ ರೂಪಿಸಬೇಕೆಂದು ಎ ಇ ಇ ಪ್ರಸನ್ನ ಕುಮಾರ್ ರವರಿಗೆ ಮನವಿ ನೀಡಲಾಯಿತು.
ಗ್ರಾಹಕರ ಸಂವಾದ ಸಭೆಯಲ್ಲಿ ಎಇ ಇ ಪ್ರಸನ್ನ ಕುಮಾರ್,ಸಹಾಯಕ ಲೆಕ್ಕಾಧಿಕಾರಿ ನಟರಾಜ್ ಕೆ ವಿ,ಸಹಾಯಕ ಇಂಜಿನಿಯರ್ (ತಾಂತ್ರಿಕ) ಸುಹಾಸ್ ಮತ್ತು ಮಲ್ಲಯ್ಯ,ಪ್ರದೀಪ್ ಎಲ್ಲ ಶಾಖೆಯ ಶಾಖಾಧಿಕಾರಿಗಳು, ಪತ್ರಕರ್ತ ಮಂಜುಸ್ವಾಮಿ ಎಂ ಎನ್, ರೈತರಾದ ಮಂಜುನಾಥ್,ಪುಟ್ಟರಾಜು, ಸಿದ್ದಪ್ಪ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ ಎನ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q