ಮಕ್ಕಳ ಬಿಸಿಯೂಟದಲ್ಲಿ ಅಪಾರ ಪ್ರಮಾಣದ ಹುಳುಗಳು ಪತ್ತೆಯಾಗಿದ್ದು, ಆಹಾರವನ್ನು ಚೆಲ್ಲಿ ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮವು ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದು, ಮಕ್ಕಳಿಗೆ ಉತ್ತಮ ಆಹಾರ ಒದಗಿಸುವುದು ಸರ್ಕಾರ ಹಾಗೂ ಶಾಲಾ ಆಡಳಿತದ ಕರ್ತವ್ಯವಾಗಿದೆ. ಆದರೆ ಶಾಲಾ ಸಿಬ್ಬಂದಿಯ ಬೇಜಾವಾಬ್ದಾರಿಯಿಂದ ಬಿಸಿಯೂಟದಲ್ಲಿ ಹುಳು ಪತ್ತೆಯಾಗಿದೆ.
ಅಡುಗೆ ಸಹಾಯಕರು ಬಿಸಿಯೂಟ ಮಾಡುವ ಮುನ್ನ ಅಕ್ಕಿ ಕ್ಲಿನ್ ಮಾಡದೇ ಅಡುಗೆ ತಯಾರಿಸಿದ್ದು, ಕೇವಲ ಅಕ್ಕಿ ಅಷ್ಟೇ ಅಲ್ಲ, ತೊಗರಿ ಬೇಳೆಯಲ್ಲಿ ಹುಳುಗಳು ಪತ್ತೆಯಾಗಿವೆ. ಹುಳು ತುಂಬಿದ ಅನ್ನವನ್ನ ವಿದ್ಯಾರ್ಥಿಗಳು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳಿಂದ ಶೇಖರಿಸಿಟ್ಟಿದ್ದ ಅಕ್ಕಿಯಿಂದ ಬಿಸಿಯೂಟ ತಯಾರು ಮಾಡಿರುವುದಕ್ಕೆ ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳ ವಿರುದ್ಧ ಪೋಷಕರು ಕ್ರೋಧಗೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


