ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಸಿಲಿನ ದಗೆಗೆ ಜನ ಹೈರಾಣಾಗಿದ್ದಾರೆ. ಹರಿಯಾಣ ಗಡಿಯ ಮಂಗೇಶ್ಕರ್‍ನಲ್ಲಿ ಗರಿಷ್ಠ ತಾಪಮಾನ 48.8 ಡಿಗ್ರಿ ತಲುಪಿದ್ದು ಹೊಸ ಆತಂಕಕ್ಕೆ ಕಾರಣವಾಗಿದೆ.
ಬಿಸಿಗಾಳಿಯ ವಾತಾವರಣ ಹಾಗೂ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿರುವುದು ಹವಾಮಾನ ವೈಪರಿತ್ಯದ ಸಂಕೇತ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ. ಮಳೆ ಕೊರತೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ. ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ಬಿಸಿ ಗಾಳಿ ಹೆಚ್ಚಾಗಿ ಬೀಸುತ್ತಿದೆ.
ನವದೆಹಲಿಯ ಪಶ್ಚಿಮದಲ್ಲಿ ಕಳೆದ 2 ತಿಂಗಳಿನಿಂದ ದಟ್ಟಮೋಡದವ ವಾತಾವರಣ ಸೃಷ್ಟಿಯಾದರೂ ಮರೆಯಾಗುತ್ತಿಲ್ಲ. ಮೋಡ ಮುಸುಕಿನ ಸನ್ನಿವೇಶದಲ್ಲಿ ಬಿರುಗಾಳಿ ಬೀಸುವುದು ಸಾಮಾನ್ಯವಾಗಿದೆ. ಇದರಿಂದ ಉಷ್ಣಾಂಶ ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB