ವೈ.ಎನ್.ಹೊಸಕೋಟೆ: ಬೆಟ್ಟಗುಡ್ಡಗಳ ಬೆಂಕಿ ಹಾಕುವುದರಿಂದ ಪರಿಸರ ನಾಶವಾಗಲಿದ್ದು, ಬೆಟ್ಟಕ್ಕೆ ಬೆಂಕಿ ಹಚ್ಚಬಾರದು ಎಂದು ಉಪಅರಣ್ಯ ವಲಯ ವಿಭಾಗಾಧಿಕಾರಿ ಬಸವರಾಜು ತಿಳಿಸಿದರು.
ಪರಿಸರಪ್ರಿಯರು ಸಂಘ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಹೋಬಳಿಯ ಇಂದ್ರಬೆಟ್ಟ ಮತ್ತು ಹೊಸದುರ್ಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಜಾಗೃತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಟ್ಟ ಗುಡ್ಡಗಳಲ್ಲಿ ಬೆಂಕಿ ಹಾಕುವುದರಿಂದ ಪ್ರಕೃತಿಯ ಜೊತೆಗೆ ಪ್ರಾಣಿ–ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ಬೆಟ್ಟದಲ್ಲಿ ವಾಸಿಸುವ ಕರಡಿ ಚಿರತೆ ಗ್ರಾಮಗಳ ಕಡೆ ಬರುತ್ತವೆ. ಅದರಿಂದ ಬೆಟ್ಟ ಗುಡ್ಡಗಳಿಗೆ ಬೇಸಿಗೆಯಲ್ಲಿ ಅಲ್ಲಿನ ಸ್ಥಳಿಯ ಗ್ರಾಮಸ್ಥರು ರಕ್ಷಣೆ ಕೈಪಿಸಬೇಕು. ಹತ್ತು ವರ್ಷಗಳ ಕಾಲ ಬೆಟ್ಟ ಗುಡ್ಡಗಳನ್ನು ಸಂರಕ್ಷಿಸಿದರೆ ಪಾವಗಡ ತಾಲ್ಲೂಕು ಮಲೆನಾಡಾಗಿ ಮಾರ್ಪಡುತ್ತದೆ ಎಂದರು.
ಬೆಕ್ಕಿ ಹಚ್ಚುವುದರಿಂದ ಮೇವು ಚಿಗುರುತ್ತದೆ ಎಂಬ ನಂಬಿಕೆ ಇದೆ. ಆದರೆ ಇದರಿಂದ ಅಲ್ಲಿ ವಾಸ ಮಾಡುತ್ತಿರುವ ಜೀವಜಂತುಗಳು ನಾಶವಾಗುತ್ತವೆ. ಆದ್ದರಿಂದ ಕನಿಷ್ಠ 2–3 ವರ್ಷಗಳ ಕಾಲ ಈ ರೀತಿಯ ಕೃತ್ಯ ಮಾಡಬೇಡಿ. ಆಗ ಇಡೀ ಪರಿಸರ ಸಂಪೂರ್ಣ ಹಸಿರುಮಯವಾಗುತ್ತದೆ. ಆಗ ಮೇವಿಗೆ ಪರದಾಡುವ ಪರಿಸ್ಥಿತಿ ಇರುವುದಿಲ್ಲ. ಬೆಂಕಿ ಹಚ್ಚುವುದು ಒಂದು ಹೇಯ ಕೃತ್ಯ ಮತ್ತು ಅಪರಾಧ ಎಂದು ಪರಿಸರ ಪ್ರಿಯರು ಸಂಘದ ಅಧ್ಯಕ್ಷ ಡಾ.ಪ್ರೇಮಯೋಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ವೀಕ್ಷಕ ಗಂಗಾಧರ, ಪರಿಸರ ಪ್ರಿಯರು ಸಂಘದ ಎನ್.ಜಿ. ಶ್ರೀನಿವಾಸ್, ಐ.ಎ. ನಾರಾಯಣಪ್ಪ , ಬಿ ಹೊಸಹಳ್ಳಿ ನಾಗರಾಜು, ಪಿ.ಸಿ.ಉಮೇಶ್, ನವೀನ್, ವೆಂಕಟೇಶ್, ಶಿವಕುಮಾರ್, ನೂರುದ್ದೀನ್, ಫಕ್ರುದ್ದೀನ್ ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA