ತುಮಕೂರು: DIGITAL ARREST ಬಗ್ಗೆ ತುಮಕೂರು ಪೊಲೀಸರು ಜಾಗೃತಿ ಮೂಡಿಸಿದ್ದು, ಸಾರ್ವಜನಿಕರಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
ವಂಚಕರು Fedex ಕೊರಿಯರ್, Income Tax Officer, E.D, TRAI, ಅಧಿಕಾರಿಗಳೆಂದು ಹೇಳಿಕೊಂಡು ಅನಾಮಧೇಯ ಕರೆ ಅಥವಾ ವಿಡಿಯೋ ಕಾಲ್ಗಳನ್ನು ಮಾಡುತ್ತಾರೆ. ಈ ವಂಚಕರು ಅನಾಮಧೇಯ ಕರೆಗಳನ್ನು ಮಾಡಲು ಪ್ರಮುಖವಾಗಿ Whatsapp ಅಥವಾ Skype ನಂತಹ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ.
ಸಾರ್ವಜನಿಕರನ್ನು ವಂಚಕರು ನಂಬಿಸುವ ವಿಧಾನ:
* ಮೇಲ್ಕಂಡಂತೆ ಕರೆ ಮಾಡುವಾಗ ಸದರಿ ನಂಬರ್ ಗಳಿಗೆ ಪೊಲೀಸ್ ಅಥವಾ ಸಂಬಂಧಪಟ್ಟ ಇಲಾಖೆಯ ಚಿತ್ರಗಳನ್ನೇ D.P.ಯಾಗಿ ಬಳಸಿ ಸಾರ್ವಜನಿಕರು ನಂಬುವಂತೆ ಮಾಡುತ್ತಾರೆ. ವಿಡಿಯೋ ಕರೆ ಮಾಡುವಾಗ ಪೊಲೀಸ್ ಇಲಾಖೆಯ ಸಮವಸ್ತ್ರ ಹಾಗೂ ಹಿಂಬದಿಯಲ್ಲಿ ಇಲಾಖೆಯ ಬೋರ್ಡ್ ಅನ್ನು ಬಳಸಿ ನಂಬುವಂತೆ ಮಾಡುತ್ತಾರೆ.
* ನೀವು ನಂಬಬಹುದಾದ ಯಾವುದೋ ಒಂದು ಅಪರಾಧವನ್ನು, ನೀವು ಮಾಡಿರುವುದಾಗಿ ನಂಬಿಸಿ ನಿಮ್ಮ ವಿರುದ್ಧ ವಾರೆಂಟ್ ಹೊರಡಿಸಿ ನಿಮ್ಮನ್ನು Digital Arrest ಮಾಡಿರುವುದಾಗಿ ಹೆದರಿಸುತ್ತಾರೆ.
* ವಂಚಕರು ನೀವು ಯಾರೊಂದಿಗೂ ಅವರು ಕರೆ ಮಾಡಿರುವ ವಿಚಾರವನ್ನು ಹಂಚಿಕೊಳ್ಳದಂತೆ Digital Arrest ಎಂಬ ಸುಳ್ಳು ಬೆದರಿಕೆಯನ್ನು ಹಾಕುತ್ತಾರೆ.
ವಂಚಕರು ಮೇಲ್ಕಂಡಂತೆ ನಂಬಿಸಿ ನಿಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಲು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣದ ಆಡಿಟ್ ಮಾಡಬೇಕಾಗಿರುತ್ತದೆ. ಆಡಿಟ್ ಮುಗಿಯುವವರೆಗೆ ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಸೂಚಿಸುವ ಖಾತೆಗೆ ವರ್ಗಾಯಿಸಿ, ಅಡಿಟ್ ನಂತರ ನಿಮ್ಮ ಖಾತೆಗೆ ವಾಪಸ್ ಹಣ ನೀಡಲಾಗುವುದು ಎಂದು ನಿಮ್ಮನ್ನು ನಂಬಿಸಿ ಹಣ ಹಾಕಿಸಿಕೊಂಡು ಮೋಸ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯವಾಗಿ Video Call ಅಥವಾ ಸಾಮಾನ್ಯ ಕರೆ ಮಾಡಿ Digital Arrest ಮಾಡಲು ಅಥವಾ ವಿಚಾರಣೆ ಮಾಡಲು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ–2023ರ ಅಡಿಯಲಿ ಪೊಲೀಸ್, ಸಿ.ಬಿ.ಐ., ಇ.ಡಿ. ಮುಂತಾದ ತನಿಖಾ ಸಂಸ್ಥೆಗಳಿಗೆ ಯಾವುದೇ ಅಧಿಕಾರವಿರುವುದಿಲ್ಲ. ಈ ರೀತಿ ಯಾವುದೇ ಕರೆಯನ್ನು ಪೊಲೀಸ್ ಅಥವಾ ಇತರೆ ತನಿಖಾ ಸಂಸ್ಥೆಗಳು ಮಾಡುವುದಿಲ್ಲ ಎಂದು ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW