ತುಮಕೂರು: ಭರತನಾಟ್ಯವು ಅತ್ಯಂತ ಜನಪ್ರಿಯ ಶಾಸ್ತ್ರೀಯ ನೃತ್ಯಗಳಲ್ಲಿ ಒಂದಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನೀಲಾಲಯ ನೃತ್ಯ ಕೇಂದ್ರ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 23ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ನೃತ್ಯ ನೀರಾಜನಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿವ ಮತ್ತು ಶಿವೆಯರಿಂದ ಪ್ರದರ್ಶಿಸಲ್ಪಟ್ಟ ಈ ದೈವ ಕಲೆ ಕಾಲಕ್ರಮೇಣ ಭರತಮುನಿಯಿಂದ ಭರತ ಭೂಮಿಯಲ್ಲಿ ಪಸರಿಸಿತು. ನಮ್ಮ ಪೋಷಕರು ಮತ್ತು ಗುರುಗಳು ಎಂದೊ ಹೇಳಿದ್ದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್ದಾಸ್ ಮಾತನಾಡಿ, ದೇಸಿ ಕಲೆಯನ್ನು ಬೆಳೆಸುವ ಈ ಕೆಲಸ ಬಾಲ ವಿಶ್ವನಾಥ್ ರವರು ಸದಾ ಮಾಡುತ್ತಾ ಬಂದಿದ್ದಾರೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ಮೂಡಿ ಬರಬೇಕು ಎಂದರು.
ನೀಲಾಲಯ ನೃತ್ಯ ಕೇಂದ್ರದ ಗುರುಗಳಾದ ಬಾಲಾ ವಿಶ್ವನಾಥ್ ರವರು ಶಾರದೆ ವರಪ್ರದೇ ನಿನಗಿದೋ ನೃತ್ಯ ಲಯ ರಾಗ ಭಾವದ ಜತೆಗೆ ನೃತ್ಯ ಮತ್ತು ನೃತ್ಯದ ಜೋಡಣೆ ಮನೋಜ್ಞವಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx