ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು BPS ಭಾರತೀಯ ಪರಿವರ್ತನ ಸಂಘದ ವತಿಯಿಂದ ನಿಡಗಲ್ಲು ಹೋಬಳಿ, ಸಿ.ಕೆ.ಪುರ ಗ್ರಾಮ ಪಂಚಾಯಿತಿಯ ಹರಿಹರಪುರ ಗ್ರಾಮದ ಎಸ್ಸಿ, ಎಸ್ಟಿ, ಒಬಿಸಿ ಎಲ್ಲಾ ಸಮುದಾಯದ ಬಡವರಿಗೆ ಸರ್ಕಾರದ ಭದ್ರತಾ ಯೋಜನೆಯ ಪಿಂಚಣಿಗಳಾದ ಸಂಧ್ಯಾ ಸುರಕ್ಷಾ ಯೋಜನೆ, ರಾಷ್ಟ್ರೀಯ ವೃದ್ಧಾಪ್ಯ ವೇತನ, ಅಂಗವಿಕಲ ಯೋಜನೆ, ವಿಧವಾ ವೇತನ, ಮನಸ್ವಿನಿ ಯೋಜನೆಗಳನ್ನು 14 ಜನರಿಗೆ ಅವರ ಮನೆ ಬಾಗಿಲಿಗೆ ಹೋಗಿ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡು ಉಚಿತವಾಗಿ ಪಿಂಚಣಿಗಳನ್ನು ಮಾಡಿಸಿ ಇವರುಗಳಿಗೆ ಆದೇಶ ಪತ್ರಗಳನ್ನು ಕೊಡಲಾಯಿತು.
ಈ ಸಂದರ್ಭದಲ್ಲಿ ಬಿಪಿಎಸ್ ತುಮಕೂರು ಜಿಲ್ಲಾ ಮುಖಂಡರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಹೆಚ್.ಕೆಂಚರಾಯ ಮಾತನಾಡಿ, ಭಾರತೀಯ ಪರಿವರ್ತನ ಸಂಘವನ್ನು ಪಾವಗಡದಲ್ಲಿ ಬಿಪಿಎಸ್ ರಾಜ್ಯಾಧ್ಯಕ್ಷರು ಹೈಕೋರ್ಟ್ ವಕೀಲರು ಆದ ಪ್ರೊ.ಹರಿರಾಮ್ ರವರ ಸಮ್ಮುಖದಲ್ಲಿ ಬುದ್ಧ ಬಸವ ಮಹಾತ್ಮ ಜ್ಯೋತಿ ಬಾಪುಲೆ ಮಾತೆ ಸಾವಿತ್ರಿ ಬಾಪುಲೆ ಶಾಹೂ ಮಹಾರಾಜ್, ನಾಲ್ವಡಿ ಕೃಷ್ಣರಾಜ, ಟಿಪ್ಪು ಸುಲ್ತಾನ್ ಕುವೆಂಪು ರವರ ತತ್ವ ಸಿದ್ಧಾಂತಗಳ ಪ್ರಾರಂಭ ಮಾಡಿ, ಎಚ್.ಡಿ.ಈರಣ್ಣನವರನ್ನು ತಾಲೂಕು ಸಂಯೋಜಕರಾಗಿ ಆಯ್ಕೆಯಾಗಿ ಈ ರೀತಿ ಹಗಲಿನಲ್ಲಿ ಅವರ ಉದ್ಯೋಗವನ್ನು ಮಾಡಿಕೊಂಡು ರಾತ್ರಿ 7:00 ಸಮಯಗಳಲ್ಲಿ ಮನೆ ಮನೆಗೆ ತೆರಳಿ ವಯಸ್ಸಾಗಿರುವವರಿಗೆ ಪಿಂಚಣಿ ಬರುತ್ತದೆಯೋ ಇಲ್ಲವೋ ಕೇಳಿಕೊಂಡು ಎಲ್ಲಾ ಸಮುದಾಯದ ಬಡವರಿಗೆ ಉಚಿತವಾಗಿ ಪಿಂಚಣಿಗಳನ್ನು ಮಾಡಿಕೊಟ್ಟಿದ್ದಾರೆ ಇವರಿಗೆ ಹಾಗೂ ಆಟೋ ಪೋಷಕರಾದ ಹನುಮಂತರಾಯ ಅಭಿನಂದನೆಗಳನ್ನು ಸಲ್ಲಿಸಿದರು.
ಸಂಯೋಜಕರಾದ ಈರಣ್ಣನವರು ಮಾತನಾಡಿ, ಭಾರತೀಯ ಪರಿವರ್ತನ ಸಂಘದ ಉದ್ಘಾಟನೆಗಳ ಕಾರ್ಯಕ್ರಮಕ್ಕೆ ಪಾವಗಡದಲ್ಲಿ ನಮ್ಮನ್ನು ಕರೆದಿದ್ದರು. ಆ ಕಾರ್ಯಕ್ರಮಕ್ಕೆ ಭಾಗಿಯಾಗಿ ಬಿಪಿಎಸ್ ರಾಜ್ಯಾಧ್ಯಕ್ಷರು, ಹೈಕೋರ್ಟ್ ವಕೀಲರು ನಮ್ಮ ಗುರುಗಳು ಹಾಗೂ ಮಾರ್ಗದರ್ಶಕರಾದ ಪ್ರೊಫೆಸರ್ ಹರಿರಾಮ್ ಹಾಗೂ ತುಮಕೂರು ಜಿಲ್ಲಾ ಮುಖಂಡರಾದ ಕೆಂಚರಾಯರವರ ನೇತೃತ್ವದಲ್ಲಿ ಸಮಾಜ ಸೇವೆ ಮಾಡಲು ಪ್ರಾರಂಭ ಮಾಡಿದ್ದೇವೆ ಅಂತ ಹೇಳಿದರು.
ತಾಲ್ಲೂಕು ಸಂಯೋಜಕರಾದ ಹರಿಹರಪುರ ಗ್ರಾಮದ ಎಚ್.ಡಿ.ಈರಣ್ಣನವರು, ಪೋಷಕರಾದ ಹನುಮಂತರಾಯಪ್ಪ ರವರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA