ರಾಯಚೂರು: ಸಿರವಾರ ತಾಲೂಕು ಕವಿತಾಳ ಪಟ್ಟಣದಲ್ಲಿ. ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಹೊಲಗಳಲ್ಲಿ ನೀರು ನುಗ್ಗಿ ಹತ್ತಿ ತೊಗರಿ ಬೆಳೆ ನಾಶವಾಗಿರುತ್ತದೆ.
ಮೌನೇಶ್ ತಂದೆ ಅಯ್ಯಾಳಪ್ಪ ಹಿರೇಕುರುಬರು ಇವರಿಗೆ ಸಂಬಂಧಿಸಿದ ಹೊಲದಲ್ಲಿ ಹತ್ತಿ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶ ಆಗುವುದಲ್ಲದೇ ಆತಂಕ ಉಂಟು ಮಾಡಿದೆ. ಎಕರೆಗೆ 15 ಸಾವಿರ ಖರ್ಚು ಮಾಡಿರುತ್ತಾರೆ.
ಒಟ್ಟು 10 ಎಕರೆ ಹತ್ತಿ ಮತ್ತು ತೊಗರಿ ಹೊಲಕ್ಕೆ ನೀರು ನುಗ್ಗಿ ಇರುತ್ತದೆ ರೈತ ಆತಂಕದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಹಾರವನ್ನು ದೊರಕಿಸಿಕೊಡಬೇಕೆಂದು. ರೈತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


