ಕಾರವಾರ: ಪಾಕಿಸ್ತಾನದಿಂದ ಅಕ್ರಮವಾಗಿ ಬಂದು ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ನೆಲಸಿದ್ದ ಪಾಕ್ ಮಹಿಳೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಖತೀಜಾ ಮೆಹರೀನ್ ಗೆ ಧಾರವಾಡ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ವಿಚಾರವಾಗಿ ಧಾರವಾಡ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, 1 ಲಕ್ಷ ಮೌಲ್ಯದ ಬಾಂಡ್ ಸಲ್ಲಿಸಬೇಕು, ಸಾಕ್ಷಿ ನಾಶಕ್ಕೆ ಯತ್ನಿಸಬಾರದು.
ಪೂರ್ವಾನುಮತಿ ಇಲ್ಲದೇ ಬೇರೆ ಸ್ಥಳಕ್ಕೆ ಹೋಗಬಾರದು. ಹೀಗೆ ಹಲವು ಷರತ್ತು ವಿಧಿಸಿ ಪಾಕಿಸ್ತಾನ ಮಹಿಳೆಗೆ ಜಾಮೀನು ಮಂಜೂರು ಮಾಡಲಾಗಿದೆ.
ಪಾಕ್ ಮಹಿಳೆ ಪಾಸ್‌ಪೋರ್ಟ್ ಹಾಗೂ ಇತರೆ ಯಾವುದೇ ದಾಖಲೆ ಇಲ್ಲದೇ ಭಾರತಕ್ಕೆ ಮಹಿಳೆ ನುಸುಳಿದ್ದಳು. ಈ ಹಿನ್ನೆಲೆ 2021ರಲ್ಲಿ ಗುಪ್ತಚರ ಇಲಾಖೆ, ಪೊಲೀಸರು ಖತೀಜಾಳನ್ನು ವಶಕ್ಕೆ ಪಡೆದಿದ್ದರು.
ದಿ.ಜಾವೇದ್ ರುಕ್ನುದ್ದೀನ್ ಜೊತೆ ಮದುವೆಯಾಗಿದ್ದು, ಮೂವರು ಮಕ್ಕಳನ್ನು ದಂಪತಿ ಹೊಂದಿದ್ದರು. ಆದರೆ ಇತ್ತೀಚೆಗೆ ಹೃದಯಾಘಾತದಿಂದ ಪತಿ ಜಾವೇದ್ ಮೃತಪಟ್ಟಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


