ತುರುವೇಕೆರೆ: ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಎ ವಿ ಎಸ್ ಎಸ್ ಕಚೇರಿಯಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತ ಸಂಘರ್ಷ ಸಮಿತಿಯ ವತಿಯಿಂದ ಭೀಮ ಕೊರೆಗಾಂವ್ ವಿಜಯ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭೀಮ ಕೊರೆಗಾಂವ್ ಸ್ಮಾರಕದ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಿ ಚಲವಾದಿ ಮಹಾಸಭಾ ಹಾಗೂ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ತಮ್ಮ ಪೂರ್ವಜರನ್ನು ಸ್ಮರಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಲವಾದಿ ಮಹಾಸಭಾ ಅಧ್ಯಕ್ಷರಾದ ಡೊಂಕಿಹಳ್ಳಿ ರಾಮಣ್ಣ, ಪೇಶ್ವೆಗಳ ವಿರುದ್ಧ ಶೋಷಿತ ಮಹರ್ ಸೈನಿಕರು ಹೋರಾಡಿ ಗೆದ್ದ ದಿನವನ್ನು ಭೀಮ ಕೊರೆಗಾಂವ್ ವಿಜಯೋತ್ಸವ ಎಂಬುದಾಗಿ ಆಚರಣೆ ಮಾಡುತ್ತಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇದನ್ನು ಆಚರಣೆಗೆ ತಂದಿದ್ದರು ಎಂದರು.
ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಕುಣಿಕೇನಹಳ್ಳಿ ಜಗದೀಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊಡಗಿಹಳ್ಳಿ ಹನುಮಂತಯ್ಯ, ಬೀಚನಹಳ್ಳಿ ಸೀನಪ್ಪ, ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಸೋಮೇನಹಳ್ಳಿ ಜಗದೀಶ್, ಪುರರಾಮಚಂದ್ರ, ಲೋಕೇಶ್ ರಂಗನಾಥಪುರ, ಲೋಕೇಶ್ ಗೋವಿಂದಘಟ್ಟ, ಸಿದ್ದಾಪುರ ಪ್ರಸನ್ನ, ಕುಣಿಕೆನಲ್ಲಿ ಮಹದೇವಯ್ಯ, ಬೆಸ್ಕಾಂನ ಸಹಾಯಕ ಇಂಜಿನಿಯರ್ ಗಿರೀಶ್, ಬಾಳೆ ಕಾಯಿ ಶೇಖರ್, ಕಾಂಗ್ರೆಸ್ ಪಕ್ಷದ ಎಸ್ಸಿ ಎಸ್ಟಿ ಘಟಕದ ಬ್ಲಾಕ್ ಅಧ್ಯಕ್ಷ ಹೆಗ್ಗೆರೆ ನರಸಿಂಹಯ್ಯ, ಕಲ್ಲ ಬೋರನಹಳ್ಳಿತಿಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz