ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಹಾಗೂ ಅಂಬೇಡ್ಕರ್ ಸಂಘ ಎಲ್ಲಾ ಸಂಘಗಳ ಜೊತೆಗೂಡಿ ಏ.27 ಮತ್ತು 28 ರಂದು ಅಂಬೇಡ್ಕರ್ 134 ನೇ ಜಯಂತಿ ಅಂಗವಾಗಿ ಭೀಮೋತ್ಸವ ಹಾಗೂ ಅಂಬೇಡ್ಕರ್ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಯಜಮಾನರಾದ ರಾಜೇಶ್ ಮತ್ತು ಪ್ರಕಾಶ್ ಸಿದ್ದರಾಜು ತಿಳಿಸಿದರು.
ಇಡೀ ಗ್ರಾಮದಲ್ಲಿ ವಿಶೇಷ ದೀಪಾಲಂಕಾರ ಹಾಗೂ ಹಸಿರು ತೊರಣ ವ್ಯವಸ್ಥೆ ಮಾಡಲಾಗಿದ್ದು. ಏ.27ರಂದು ಸಂಜೆ ಚಾಲನೆ ನೀಡಲಾಗುತ್ತದೆ. ಬುದ್ದ ಬಸವ ಅಂಬೇಡ್ಕರ್ ರವರ ಗ್ರಾಮದ ಎಲ್ಲಾ ಬೀದಿಗಳಲ್ಲಿ ದೊಡ್ಡ ಕಟೌಟ್ ಗಳನ್ನು ಅಳವಡಿಸಲಾಗಿದೆ.
ಭಾನುವಾರ ಸಂಜೆ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೈದಾನದಲ್ಲಿ ಧ್ವನಿ ಮತ್ತು ಬೆಳಕು ಲೇಸರ್ ಶೋ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತಗಾಗಿ ಚಿತ್ರ ಪ್ರದರ್ಶನ ಮಾಡಲಾಗಿದೆ.
ಏ.28ರಂದು ಮಧ್ಯಾಹ್ನ 12 ಗಂಟೆಗೆ ಭೀಮೋತ್ಸವದ ಸಂದರ್ಭದಲ್ಲಿ ಒಂದು ನವಜೊಡಿ ಸಾಮೂಹಿಕ ವಿವಾಹ ನಡೆಯಲಿದೆ. ಅಂಬೇಡ್ಕರ್ ಹಬ್ಬವನ್ನು ಅದ್ದೂರಿ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಪೋಟೋವನ್ನು ಕುರಿಸಿ ಆರಂಭಗೊಳ್ಳಲಿದ್ದು, ಗ್ರಾಮದ ಹಿರಿಯರಿಂದ ಉದ್ಘಾಟಿಸಲಿದ್ದಾರೆ. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆ ಮುಗಿದ ಮೇಲೆ ಅದೇ ರಾತ್ರಿ ಆರ್ಕೆಸ್ಟ್ರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಗ್ರಾಮದ ಯಜಮಾನ ಹಾಗೂ ಗ್ರಾಪಂ ಉಪಾಧ್ಯಕ್ಷ ಹಾದನೂರು ಪ್ರಕಾಶ್, ಪ್ರತಿ ವರ್ಷದಂತೆ ಈ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಆದರೆ ಈ ಬಾರಿ ಅಂಬೇಡ್ಕರ್ ಜಯಂತಿ ಅಂಗವಾಗಿ ಒಂದು ಸಾಮೂಹಿಕ ವಿವಾಹ ನಡೆಯಲಿದೆ, ಅದು ವಿಶೇಷತೆ. ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಪಾಲಿಸಿ ಗ್ರಾಮದ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಒಂದು ವಾರದಿಂದ ಗ್ರಾಮದ ಬೀದಿಗಳಲ್ಲಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ರಂಗೋಲಿ ಬಿಡಿಸುವುದು ಮತ್ತು ಯುವಕರು ತಮ್ಮ ತಮ್ಮ ಬೀದಿಯಲ್ಲಿ ದೀಪಾಲಂಕಾರ ಮತ್ತು ಇಡಿ ಗ್ರಾಮದಲ್ಲಿ ನೀಲಿ ಬಣ್ಣದ ಬಾವುಟ ಕಟ್ಟಿ ವ್ಯವಸ್ಥೆ ಮಾಡಿಕೊಂಡು ಗ್ರಾಮ ನೀಲಿ ಬಣ್ಣವಾಗಿದೆ ಎಂದು ಬಣ್ಣಿಸಿದರು.
ಗ್ರಾಮ ದೇವತೆ ಹಬ್ಬಗಳಂತೆ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇಡೀ ಗ್ರಾಮ ಸೇರಿಕೊಂಡು ಶಾಲೆಯ ಮಕ್ಕಳಿಂದ ಕಳಸ ಹೊತ್ತು ತರುವುದು. ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಪೋಟೋವನ್ನು ಕುರಿಸಿಕೊಂಡು ಮಂಗಳವಾದ್ಯ ಮೂಲಕ ನಗಾರಿ ತಮಟೆ ಹಾಗೂ ಸೌಂಡ್ಸ್ ಹಾಕಿಕೊಂಡು ಗ್ರಾಮದಲ್ಲಿ ಪ್ರತಿವರ್ಷದಂತೆ ನಡೆಸುತ್ತೆವೆ ಎಂದು ಹೇಳಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW