ಬೆಳಗಾವಿ: ಭೀಮ ಕೋರೆಗಾವ್ 206ನೇ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಸಮಾಜದ ವಿವಿಧ ಸಂಘಟನೆಯ ಮುಖಂಡರುಗಳು ಬೆಳಗಾವಿ ನಗರದ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಭೀಮಾಕೋರೆಗಾವ್ ವಿಜಯೋತ್ಸವ ಹಾಗೂ ಭೀಮಾ ಕೋರೆಗಾವ್ ಯುದ್ಧದಲ್ಲಿ ಶೌರ್ಯವನ್ನು ಮೆರೆದ ಯೋಧರಿಗೆ ಮೌನವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಪ್ಪ ಚೌಗುಲೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಭೀಮ ಕೋರೆಗಾವ್ ಯುದ್ಧ ಜರುಗಿ 206 ವರ್ಷಗಳು ಕಳೆದಿವೆ. ಯುದ್ಧದಲ್ಲಿ ಶೌರ್ಯ ಮೆರೆದ ಯೋಧರಿಗೆ ನಾವು ಗೌರವ ವಂದನೆಯನ್ನು ಸಲ್ಲಿಸುತ್ತಿದ್ದೇವೆ .
1818 ಜನವರಿ 1 ರಂದು ನಡೆದ ಪೇಶ್ವೆಗಳು ವಿರುದ್ಧ ಈಸ್ಟ್ ಇಂಡಿಯಾ ಕಂಪನಿ ಜೊತೆ ದಲಿತ ಸೈನಿಕರು ಪೇಶ್ವೆಗಳವಿರುದ ವಿಜಯ ಪತಾಕೆ ಹಾರಿಸಿದ್ದು ಇತಿಹಾಸ. ಅದರ ನಿಮಿತ್ತವಾಗಿ ಇಂದು ನಾವು ಆ ಮಹಾನ್ ಸೈನ್ಯಾನಿಗಳಿಗೆ ಮಾನವಂದನವನ್ನು ನೀಡುತ್ತಿದ್ದೇವೆ .ರಾಜ್ಯ ಹಾಗೂ ವಿವಿಧ ದಲಿತ ಸಂಘಟನೆಗಳು ಅಲ್ಲದೆ ಬೇರೆ ದೇಶಗಳಲ್ಲಿ ಕೂಡ ಈ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ಈ ಸಂದರ್ಭದಲ್ಲಿ ಸುರೇಶ್ ತಳವಾರ್ ವಿವಿಧ ದಲಿತ ಮುಖಂಡರುಗಳು ಉಪಸ್ಥಿತರಿದ್ದರು.


