ಹೆಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವವನದಲ್ಲಿ ಆದಿಕರ್ನಾಟಕ ಮಹಾಸಭಾ ವತಿಯಿಂದ ಅದ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ ಭೀಮಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮವನ್ನು ಗೌರವ ಅಧ್ಯಕ್ಷ ಚಂದ್ರಶೇಖರ ಮೂರ್ತಿ ಹಾಗೂ ವೇದಿಕೆಯ ಗಣ್ಯರು ದೀಪಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಹೆಚ್.ಸಿ.ನರಸಿಂಹಮೂರ್ತಿ, ಮೊದಲ ಬಾರಿಗೆ ಸಮಾಜದ ಎಲ್ಲಾ ಹಿರಿಯರ ಮತ್ತು ಯುವಕರ ಬೆಂಬಲದಿಂದ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಪೂರ್ವಜರು ಎಷ್ಟು ಪರಾಕ್ರಮಶಾಲಿಗಳು ಎಂಬುದನ್ನು ಅರಿಯಲು ನಾವು ಅದರ ಬಗ್ಗೆ ತಿಳಿದಿರುವ ಸಂಪನ್ಮೂಲ ವ್ಯಕ್ತಿಯನ್ನು ಕರೆಸಿ ಅದರ ಬಗ್ಗೆ ಮಾಹಿತಿ ತಿಳಿಯ ಬೇಕೆಂಬ ಅಭಿಲಾಷೆಯಿಂದ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ M.T. ಡಾ.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಪೂರ್ವಜರು ಸ್ವಾಭಿಮಾನದ ನೆಲೆಯನ್ನು ಕಂಡುಕೊಳ್ಳಲು ಎಷ್ಟು ಹೋರಾಟಮಾಡಿದೆ ಎಂಬುವುದಕ್ಕೆ ಕೋರೆಗಾಂವ್ ಯುದ್ದ ನಿದರ್ಶನ. ಬ್ರಾಹ್ಮಣರ ಒಡೆದಾಳುವ ನೀತಿಯಿಂದ, ಅವರ ಗೊಡ್ಡು ಸಂಪ್ರದಾಯಗಳ ಆಚರಣೆಯಿಂದ ಹೊರಬರಲು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದಕ್ಕೆ ಯುದ್ಧ ಮಾಡಿ ವಿಜಯ ಸಾಧಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಕೃಷ್ಣಮೂರ್ತಿ, ಶಾಸಕ ಅನಿಲ್ ಚಿಕ್ಕಮಾದು, ಅದಿಕರ್ನಾಟಕ ಮಹಾ ಸಭಾ ಕಾರ್ಯದರ್ಶಿ ಬನ್ನವಾಡಿ ರಮೇಶ್, ವೆಂಕಟ ಸ್ವಾಮಿ, ಚಿಕ್ಕವೀರನಾಯಕ, ಶಿವಣ್ಣ, ಪರಶಿವಮೂರ್ತಿ, ಅಕ್ಬರ್ ಪಾಷ, ಮರಿದೇವಯ್ಯ, ವನಸಿರಿ ಶಂಕರ್ ಆಟೋ ಕುಮಾರ್, ಸಣ್ಣಕುಮಾರ್, ಮಲಾರ ಪುಟ್ಟಯ್ಯ , ಮುದ್ದುಮಲ್ಲಯ್ಯ, ಚಾ ಶಿವಕುಮಾರ್, ಜೀವಿಕ ಬಸವರಾಜು, ಸಮಾಜದ ಎಲ್ಲಾ ಮುಖಂಡರು ಗ್ರಾಮಸ್ಥರು ಯುವಕರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


