ಇಡೀ ಕುಟುಂಬ ಮದುವೆಯ ಸಡಗರದಲ್ಲಿ ಸಂಭ್ರಮಿಸುತ್ತಿದ್ದರೆ, ಆ ಕುಟುಂಬಕ್ಕೆ ನೇಣು ಹಾಕಿಕೊಂಡು ಶಾಕ್ ನೀಡಿದ್ದರು ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ.
ಮುಂಬೈನಲ್ಲಿ ವಾಸವಿದ್ದ ಅಮೃತಾ, ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾಗಲ್ಪುರಕ್ಕೆ ಬಂದಿದ್ದರು. ಈ ಸಮಯದಲ್ಲಿ ಅಪಾರ್ಟ್‍ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೆ ಇಂಥದ್ದೇ ಕಾರಣ ಎಂದು ತಿಳಿದು ಬಂದಿಲ್ಲ. ಆದರೆ, ಸಾವಿಗೂ ಮುನ್ನ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದು, ಅದು ಅನುಮಾನ ಮೂಡಿಸುವಂತಿತ್ತು. ಸ್ಟೇಟಸ್ ಹಾಕಿ ಒಂದು ಗಂಟೆ ನಂತರ ಅಮೃತಾ ಶವವಾಗಿ ಪತ್ತೆಯಾಗಿದ್ದರು.
ಈ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ದೋಣಿಯ ಕುರಿತಾದ ಬರಹವಿತ್ತು. ಅವನ ಜೀವನ 2 ದೋಣಿಯಲ್ಲಿ ನಡೆಯುತ್ತಿದೆ. ನಾನು ನನ್ನ ದೋಣಿಯನ್ನು ಮುಳುಗಿಸಿಕೊಳ್ಳುವ ಮೂಲಕ, ಅವನ ದೋಣಿಗೆ ಸುಗಮ ದಾರಿ ಮಾಡಿಕೊಡುವೆ ಎಂದು ಬರೆದುಕೊಂಡಿದ್ದರು.
ಈ ದೋಣಿಯ ಅರ್ಥ ಅವರ ಪತಿ ಎಂದು ಹೇಳಲಾಗುತ್ತಿದೆ. ನಟಿಯ ಪತಿಗೆ ಮತ್ತೊಂದು ಸಂಬಂಧವಿತ್ತಾ? ಇದೇ ಕಾರಣಕ್ಕೆ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುತ್ತ ತನಿಖೆ ನಡೆಯುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA