ತುಮಕೂರು : ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಗೃಹ ಸಚಿವ ಅರಗ ಜ್ಞಾನೆಂದ್ರ ಭೇಟಿ ನೀಡಿದರು.
ಇದೇ ವೇಳೆ ಮಾಧ್ಯಮಗಳೊಂದಗೆ ಮಾತನಾಡಿದ ಅವರು, ನಾನು ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಪ್ರಗತಿ ಬಗ್ಗೆ ಕೆಲವು ಅಧಿಕಾರಿಗಳನ್ನು ಕರೆದು ಅವರ ಜೊತೆ ಚರ್ಚೆ ಮಾಡಿದ್ದೇನೆ. ವಿಶೇಷವಾಗಿ ಕುಡಿಯುವ ನೀರು, ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ಪ್ರಗತಿ ಚೆನ್ನಾಗಿದೆ. ಅಧಿಕಾರಿಗಳು ವಿಶೇಷವಾದ ಪ್ರಯತ್ನ ಮಾಡುತ್ತಿದ್ದಾರೆ ಹಾಗೂ ಕೋವಿಡ್ ಗೆ ಯಾವ ರೀತಿ ಪ್ರಿಪೇರ್ ಆಗಿದೆ, ನಾಲ್ಕನೇ ಅಲೆ ಬಂದರೆ ನಮ್ಮ ತಯಾರಿ ಏನು ಎಂಬುದರ ಬಗ್ಗೆ ಎಲ್ಲವನ್ನೂ ಮಾತನಾಡಿದ್ದೇವೆ ಎಂದರು.
ಪಿಎಸ್ ಐ ಅಕ್ರಮ ಪರೀಕ್ಷೆ ಬಗ್ಗೆ ಸ್ಪಷ್ಟನೆಕೊಟ್ಟ ಗೃಹ ಸಚಿವರು, ಎಲ್ಲಾ ಕಾಲದಲ್ಲಿಯೂ ಇದು ಆಗಿದೆ ಎಂಬುದು ಹೊರಗೆ ಬರುತ್ತಿದೆ. ನನಗೆ ಮಾಹಿತಿ ಲಭ್ಯ ಆದ ತಕ್ಷಣ ಒಂದು ಸಣ್ಣ ಸುಳಿವು ಸಿಕ್ಕಿತು. ಕೇವಲ ಎರಡು ಗಂಟೆಗಳಲ್ಲಿ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಸಿ ಓ ಡಿ ಒಂದು ವಿಶೇಷ ದಳವನ್ನು ರಚನೆ ಮಾಡಿ ತುರ್ತು ತನಿಖೆ ಮಾಡಬೇಕು ಎಂದು ಆದೇಶ ಕೊಟ್ಟಿದ್ದೇನೆ ಎಂದರು.
ಭ್ರಷ್ಟಾಚಾರಗಳು ನಡೆಯುತ್ತಿರುವುದು ಇದು ಹೊಸದೇನಲ್ಲ. ಕಾಂಗ್ರೆಸ್ ಅವಧಿಯಲ್ಲೂ ಪಿಯುಸಿ ಪತ್ರಿಕೆ ನಾಲ್ಕು ಬಾರಿ ಲೀಕ್ ಆಗಿದೆ. ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಆರೋಪ ಮಾಡುವ ಮೊದಲು ಅವರ ಕಾಲದಲ್ಲಿಯೂ ಆಗಿದೆ ಅನ್ನೋದನ್ನ ಮರೆತು ಹೋಗಿದ್ದಾರೆ. ಆದರೆ ನಾವು ಪಕ್ಷ ಪಂಗಡ ನೋಡದೆ ಎಲ್ಲರನ್ನೂ ತಿಳಿದು ಅರೆಸ್ಟ್ ಮಾಡಿದ್ದೇವೆ ಇನ್ನು ಪರೀಕ್ಷೆಗಳಲ್ಲಿ ಇಂತಹ ಕೆಲಸ ಮಾಡುವವರಿಗೆ ಮುಟ್ಟಿ ನೋಡಿಕೊಳ್ಳಬೇಕು ಹಾಗೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್-ಪವಾರ್ ಉಪಸ್ಥಿತರಿದ್ದರು
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5