ಭಟ್ಕಳ: ತಾಲೂಕಿನ ಕಡಲ ಕಿನಾರೆಯ ನೂಜಿ ಗ್ರಾಮದ ಗಂಜಿ ಗೆರೆಯಲ್ಲಿ ನೂತನ ಶ್ರೀ ಚಂದ್ರಪ್ರಭಾ ತೀರ್ಥಂಕರ ಜಿನಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಇಂದು ಸಂಪನ್ನಗೊಂಡಿತು.
ಮುನಿಶ್ರೀ ವಿಧಿತ ಸಾಗರ ಮಹಾರಾಜರ ಪೂರ್ವಾಶ್ರಮದ ಧರ್ಮಭೂಮಿಯಲ್ಲಿ ಅವರ ಪ್ರೇರಣೆ , ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಇಂದು ನೂತನ ಬಸದಿ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮಗಳು ಭವ್ಯವಾಗಿ ನಡೆದವು. ಮುನಿಶ್ರೀ ವಿಧಿತ ಸಾಗರ ಮುನಿ ಮಹಾರಾಜರ ಶಿಷ್ಯರಾಜ ಮುನಿ ಶ್ರೀ ಸುಗಮ್ಯ ಸಾಗರ ಮಹಾರಾಜರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಾಪನಾಚಾರ್ಯ ಮಾಣಿಕ್ ಶ್ರೀಪಾಲ್ ಚಂದೆಗಡ್ ಸರ್ ಸದಲಗಾ ಬೆಳಿಗ್ಗೆ ಧ್ವಜಾರೋಹಣ ,ಜಲ ಅಭಿಷೇಕ, ಶಾಂತಿ ಧಾರೆ, ನಿತ್ಯ ಪೂಜೆ , ಜಿನಮಂದಿರದ ಶಿಲನ್ಯಾಸದ ಭೂಮಿ ಶುದ್ದಿ , ಜಪಾನೂಷ್ಟಾನ ,ಶಿಲನ್ಯಾಸ ಮಂಗಳ ದ್ರವ್ಯಗಳ ಶುದ್ದಿ, ಮಂಗಳ ಕಳಸ ಮತ್ತು ಕೂರ್ಮ ಶಿಲಾ ಸ್ಥಾಪನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸಿದ್ದನಗೌಡ ಪಾಟೀಲ ಹಾರೋಗೆರೆ, ಮಂಜಯ್ಯ ಜೈನ್, ಜಯಕುಮಾರ್ ಜೈನ್, ಮಹಾವೀರ್ ಭಯ್ಯಜಿ , ಕಾಂತರಾಜು ಜೈನ್, ರವಿರಾಜ್ ಜೈನ್, ಸಾಧನ ದೀದಿ, ಪ್ರಶಾಂತ್ ಜೈನ್, ತೇಜು ಕುಮಾರ್ ಜೈನ್ ಸೇರಿದ್ದಂತೆ ಗಂಜಿಗೆರೆ ಗ್ರಾಮಸ್ಥರು, ಶ್ರೀ ಚಂದ್ರನಾಥ ದಿಗಂಬರ ಜೈನ ಸಂಘದ ಪದಾಧಿಕಾರಿಗಳು, ಜೈನ ಮಹಿಳಾ ಸಂಘಗಳು ಪದಾಧಿಕಾರಿಗಳು ಸುತ್ತಮುತ್ತಲ ಗ್ರಾಮದ ಜೈನ ಮುಖಂಡರು, ಶ್ರಾವಕ — ಶ್ರಾವಕಿಯರು ಭಾಗವಹಿಸಿದ್ದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296