ಬಿಹಾರ್: ವ್ಯಕ್ತಿಯೊಬ್ಬ ಯುವಕನನ್ನು ಅಪಹರಿಸಿ, ಬಳಿಕ ಆತನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿಸಿದ ವಿಚಿತ್ರ ಘಟನೆ ನಡೆದಿರುವುದು ಬಿಹಾರದಲ್ಲಿ.
ವೈಶಾಲಿ ಜಿಲ್ಲೆಯವರಾದ ಗೌತಮ್ ಕುಮಾರ್ ಅವರು ಫತೇಪುರ್ ಜಿಲ್ಲಿಯ ರೇಪುರದ ಉತ್ಮಮಿಟ್ ಮಧ್ಯ ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಯಾಗಿದ್ದಾರೆ. ರಾಜೇಶ್ ರಾಯ್ ಎಂಬ ವ್ಯಕ್ತಿ ಆತನನ್ನು ಅಲ್ಲಿಂದ ಅಪಹರಿಸಿದ್ದು ಬಳಿಕ ತಮ್ಮ ಮಗಳು ಚಾಂದಿನಿಯನ್ನು ಕೊಟ್ಟು ಮದುವೆ ಮಾಡಿದ್ದಾರೆ.
ಆದರೆ ಗೌತಮ್ ಬಲವಂತದ ಮದುವೆಯನ್ನು ನಿರಾಕರಿಸಿದ್ದು, ಪೊಲೀಸರಿಗೆ ದೂರು ನೀಡಿ ಅಪಹರಣಕಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


