ಬೀದರ್ : ಚೆಂಡು ಹೂವಿನ ಬೆಳೆಯ ಜೊತೆಗೆ ಬೆಳೆದಿದ್ದ ಸುಮಾರು 15,10,000 ಸಾವಿರ ರೂ. ಮೌಲ್ಯದ 15 ಕೆ.ಜಿ 100 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಸಾವಳಿ ಗ್ರಾಮದಲ್ಲಿ ನಡೆದಿದೆ.
ಸಾವಳಿ ಗ್ರಾಮದ ನಿವಾಸಿ ಸಂತೋಷ ತಂದೆ ನರಸಿಂಗರಾವ್ ಎನ್ನುವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಸಾವಳಿ ಗ್ರಾಮದ ತನ್ನ ಹೊಲದಲ್ಲಿ ಸಂತೋಷನು ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ಪಿಎಸ್ ಐ ಆಶಾ ಅವರ ತಂಡ ಪಂಚರ ಸಮ್ಮುಖದಲ್ಲಿ ಇಂದು ದಾಳಿ ನಡೆಸಿ, ಹೊಲದಲ್ಲಿ ಬೆಳೆದಿರುವ ಒಟ್ಟು 51 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಎಲ್ಲ ಗಿಡಗಳ ಒಟ್ಟು ತೂಕ 15 ಕೆ.ಜಿ 100 ಗ್ರಾಂ ಆಗಿದ್ದು, ಸುಮಾರು 15 ಲಕ್ಷ 10 ಸಾವಿರ ರೂ. ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿಸಂತೆ ಕಮಲನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC