ಬೀದರ್: ಜಿಲ್ಲೆಯ ವರ್ಷದ ಮೊದಲ ಮಳೆ ಸೋಮವಾರ ಬೀದರ್ ನಗರ ಸೇರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತುಂತುರಿನಿಂದ ಸುರಿಯಿತು.
ಬೀದರ್ ನಗರದಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಜೋರು ಮಳೆಯಾದರೆ, ಹುಮನಾಬಾದ್ ನಲ್ಲಿ ಮಧ್ಯಾಹ್ನವೇ ಮಳೆ ಹನಿ ಬಿದ್ದವು, ಇನ್ನು ಔರಾದ್, ಭಾಲ್ಕಿ ಸೇರಿ ನಾನಾ ಕಡೆ ಸಂಜೆ ಕೆಲ ಹೊತ್ತು ತುಂತುರಾಗಿ ಸುರಿಯಿತು.
ಬೇಸಿಗೆಯ ಆರಂಭದಲ್ಲೇ ಸುಡುಬಿಸಿಲಿನೊಂದಿಗೆ ಮಳೆಯ ಸಿಂಚನವಾಯಿತು. ಕೆಲವಡೆ ಗುಡುಗಿನ ಸದ್ದು, ತಣ್ಣನೆಯ ಗಾಳಿ ಬೀಸಿತು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


