ಬೀದರ್: ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಂಪೌಂಡ್ ಗೆ ಕೆಕೆಆರ್ ಟಿಸಿ ಬಸ್ ವೊಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಇಂದು (ರವಿವಾರ) ಬೆಳಿಗ್ಗೆ ಬೀದರ್ ನಿಂದ ಮಹಾರಾಷ್ಟ್ರದ ಉದಗೀರ್ ಗೆ ಹೋಗುವ ಕೆಕೆಆರ್ ಟಿಸಿ ಬಸ್, ಬೀದರ್ ನಿಂದ ಪ್ರಯಾಣಿಕರನ್ನು ತುಂಬಿಕೊಂಡು ಉದಗೀರ್ ಕಡೆಗೆ ಹೊರಟಿತ್ತು.
ಬಸ್ ನಿಲ್ದಾಣದ 6 ರಿಂದ 7 ಕಿ. ಮೀ. ದೂರದವರೆಗೆ ಬಂದ ಬಸ್ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಕಂಪೌಂಡ್ ಗೆ ಢಿಕ್ಕಿ ಹೊಡೆದಿದೆ. ಬಸ್ ನಲ್ಲಿ ಸುಮಾರು 15 ಜನ ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC