ಬೀದರ್: ವ್ಯಕ್ತಿಯೊಬ್ಬನಿಗೆ ಕೆಲವರು ಬೆದರಿಕೆಯೊಡ್ಡಿ, ಯಾತನೆ ನೀಡುತ್ತಿರುವ ಸಂಬಂಧ ನೊಂದ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ಬಗ್ಗೆ ಹುಮನಾಬಾದ ಪೊಲೀಸರು ಕಾನೂನು ರೀತಿಯ ಕ್ರಮಕೈಗೊಂಡಿದ್ದಾರೆ.
ವ್ಯಕ್ತಿಯು ತನಗೆ ಕೆಲವರು ಬೆದರಿಕೆಯೊಡ್ಡಿ ಯಾತನೆ ನೀಡುತ್ತಿದ್ದಾರೆ ಎಂದು ಅಳವತ್ತುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ವಿಡಿಯೋ ಹರಿಯಬಿಟ್ಟಿದ್ದ. ಈ ಸಂಬಂಧ ವ್ಯಕ್ತಿಗೆ ಯಾತನೆ ನೀಡುತ್ತಿದ್ದವರ ವಿರುದ್ಧ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮವನ್ನು ಜರುಗಿಸಲಾಗಿದೆ.
ಸಾಮಾಜಿಕ ಜಾಲತಾಣದ ಅಧಿಕಾರಿ, ಸಿಬ್ಬಂದಿಯ ಚುರುಕತನದಿಂದ ಮತ್ತು ಹುಮನಾಬಾದ ಪೊಲೀಸರು ನೊಂದವರಿಗೆ ತಕ್ಷಣ ಸ್ಪಂದಿಸಿ ಯಾತನೆ ನೀಡಿದವರ ವಿರುದ್ದ ಕೈಕೊಂಡ ಕ್ರಮದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


