ಬೀದರ್: ಪೋಷಕತ್ವ ಯೋಜನೆಯ ಕುರಿತು ಜನರಿಗೆ ಇನ್ನು ಹೆಚ್ಚಿನ ಜನಜಾಗೃತಿಯನ್ನು ಮೂಡಿಸುವ ಕುರಿತು ರಾಜ್ಯಮಟ್ಟದ ಪೋಷಕತ್ವ ಯೋಜನೆ ತಂಡದೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯ ಕಚೇರಿ ಬೀದರ್ ನಲ್ಲಿ ಸಭೆ ನಡೆಯಿತು.
ಈ ಸಭೆಯನ್ನು ಪ್ರಾರ್ಥನೆ ಮೂಲಕ ಆರಂಭ ಮಾಡಲಾಯಿತು. ಈ ಸಭೆಯಲ್ಲಿ ಸ್ವಾಗತವನ್ನು ಪೋಷಕತ್ವ ಯೋಜನೆಯ ರಾಜ್ಯ ಸಂಚಾಲಕರಾದ ಶಿವಮಲ್ಲು ಅವರು ಮಾಡಿದರು ಮತ್ತು ಸಭೆಯ ಕುರಿತು ತಿಳುವಳಿಕೆಯನ್ನು ಮೂಡಿಸಿದರು.
ಈ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಫಾದರ್ ವರ್ಗೀಸ್ ಪಲ್ಲಿಪುರಂ ಅವರು, ಪೋಷಕತ್ವ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು. ಪೋಷಕತ್ವ ಯೋಜನೆಯಲ್ಲಿ ಇರುವಂತಹ ಹೊಸ ಬದಲಾವಣೆ ಕುರಿತು ಮಾಹಿತಿಯನ್ನು ಕೊಟ್ಟರು. ರಾಜ್ಯಮಟ್ಟದಲ್ಲಿ ಯಾವ ರೀತಿಯಲ್ಲಿ ಪೋಷಕತ್ವ ಯೋಜನೆಯು ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಡಾನ್ ಬಾಸ್ಕೊ ಚಿಕ್ಕಪೇಟೆ ಸಂಸ್ಥೆಯ ನಿರ್ದೇಶಕರಾದ ಫಾದರ್ ಸ್ಟೀವನ್ ಲಾರೆನ್ಸ್ ಮಾತನಾಡಿ, ಪೋಷಕತ್ವ ಯೋಜನೆ ಕುರಿತು ಹಾಗೂ ಡಿ. ಸಿ. ಪಿ. ಯು. ನ ಸದಸ್ಯರು ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ನಾವೆಲ್ಲರೂ ಮಕ್ಕಳ ಪರವಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾಗಿ ಇರುವಂತ ಮಕ್ಕಳಿಗೆ ಪೋಷಕತ್ವ ಯೋಜನೆ ಲಾಭವನ್ನು ನಾವು ದೊರಕಿಸಿಕೊಳ್ಳಬೇಕೆಂದು ಹೇಳಿದರು.
ಬೀದರ್ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯಾದ ರೂಪ ಮಾತನಾಡಿ, ಪೋಷಕತ್ವ ಯೋಜನೆ ಕುರಿತು ಅರಿವು ಸರ್ಕಾರದ ಎಲ್ಲರಂಗದ ಅಧಿಕಾರಿಗಳಿಗೆ ಮೂಡಿಸುವುದು ಬಹಳ ಮುಖ್ಯವಾದ ವಿಷಯವಾಗಿದೆ. ವಿಶೇಷವಾಗಿ ಪೋಷಕತ್ವ ಯೋಜನೆಯು ಸೂಕ್ತ ಮಕ್ಕಳಿಗೆ ದೊರೆಯಬೇಕಾದರೆ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಹೆಚ್ಚಿನ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ ಡಾನ್ ಬೋಸ್ಕೋ ಚಿಕ್ಕಪೇಟೆ ಸಂಸ್ಥೆಯ ಪೋಷಕತ್ವ ಯೋಜನೆಯ ಕುರಿತು ಮಾಡುತ್ತಿರುವ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಕೊನೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸೀಮಪ್ಪಾ ಮಾತನಾಡಿ, ಪೋಷಕತ್ವ ಯೋಜನೆಯ ರಾಜ್ಯ ನಿರ್ದೇಶಕರ ಜೊತೆಯಲ್ಲಿರಾದ ಫಾದರ್ ವರ್ಗಿಸ್ ಪಲ್ಲಿಪುರಂ ಅವರ ಜೊತೆಯಲ್ಲಿ ಕಲಿತಂತ ವಿಷಯಗಳ ಬಗ್ಗೆ ಮೇಲು ಹಾಗೂ ಡಾಗ್ ಬೋಸ್ಕೋ ಚಿಕ್ಕಪೇಟೆ ಸಂಸ್ಥೆಯಲ್ಲಿ ತಾವು ಕೆಲಸ ಮಾಡಿದ ಸಂದರ್ಭದಲ್ಲಿ ತಮಗೆ ದೊರೆತ ಬೆಂಬಲವೇ ಈ ಮಟ್ಟದಲ್ಲಿ ತನ್ನ ಬೆಳವಣಿಗೆ ಕಾರಣವೆಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣೆ ಘಟಕದ ಅಸಾಂತಿಕ ಅಧಿಕಾರಿಯ ಗೌರಿಶಂಕರ್ ಅವರು ಸಭೆಯಲ್ಲಿ ಧನ್ಯವಾದ ಅರ್ಪಿಸಿದರು. ಈ ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎಲ್ಲ ಸದಸ್ಯರು ಪಾಲ್ಗೊಂಡರು ಮತ್ತು ಡಿಸಿಪಿಯು ಯೂನಿಟ್ ಸದಸ್ಯರು ಮತ್ತು ಬೀದರ್ ಜಿಲ್ಲೆ ಡಾಗ್ ಬೋಸ್ಕೋ ಚಿಕ್ಕಪೇಟೆ ಪೋಷಕತ್ವ ಯೋಜನೆಯ ಸಾಮಾಜಿಕ ಸಂಯೋಜಕರಾದ ರಮೇಶ್ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC