ಬೀದರ್: ಸರ್ಕಾರದಿಂದ ಬಡ ಜನರಿಗೆ ಒದಗಿಸಲು ವಿತರಿಸಿದ ಪಡಿತರ ಅಕ್ಕಿ, ಮತ್ತು ಪೌಷ್ಠಿಕ ಆಹಾರವನ್ನು ಅಕ್ರಮ ಸಾಗಾಟ ನಡೆಸುತ್ತಿದ್ದ ಆರೋಪದಡಿ, ಮಾಲು ಸಹಿತ ಐದು ಜನರನ್ನು ಬೀದರ್ ಜಿಲ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರಿಂದ 23 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೀದರ ಜಿಲ್ಲೆಯ ಖಟಕ ಚಿಂಚೋಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆ.ಇ.ಬಿ ಹತ್ತಿರ ಸರ್ಕಾರದಿಂದ ವಿತರಿಸುವ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪಿ.ಎಸ್.ಐ ಹಣಮಂತ, ರಾಜೇಂದ್ರಕುಮಾರ ಮತ್ತು ಆಹಾರ ನಿರೀಕ್ಷಕರು ಭಾಲ್ಕಿ ಗುಡ್ಸ್ ವಾಹನ ಹಾಗೂ ಅದಲ್ಲಿದ್ದ 81,600 ರೂ. ಮೌಲ್ಯದ 24 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆದುಕೊಂಡರು.
ಮನ್ನಾಏಖೇಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜ, ಶೇಖರ, ಆಹಾರ ನಿರೀಕ್ಷಕರು ಬೀದರ ರವರ ಸಮಕ್ಷಮದಲ್ಲಿ ನಡೆದ ದಾಳಿಯಲ್ಲಿ 6,80,000 ರೂ. ಬೆಲೆ ಬಾಳುವ 200 ಕ್ವಿಂಟಾಲ್ ಹಾಗೂ ಒಂದು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಹಳ್ಳಿಖೇಡ್–ಬಿ ಪೊಲೀಸ್ ಠಾಣೆಯ ಪಿ.ಎಸ್.ಐ. ಅಯ್ಯಪ್ಪ, ಬಿಂದುಕುಮಾರಿ, ಆಹಾರ ನಿರೀಕ್ಷಕರು ಹುಮನಾಬಾದ ಇವರ ಸಮಕ್ಷಮದಲ್ಲಿ ನಡೆದ ದಾಳಿಯಲ್ಲಿ 1,02,000 ರೂ ಬೆಲೆ ಬಾಳುವ 29.99 ಕ್ವಿಂಟಾಲ್ ಅಕ್ಕಿ ಮತ್ತು ಒಂದು ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ.
ಬ.ಕಲ್ಯಾಣ ನಗರ ಪೊಲೀಸ್ ಠಾಣೆಯ ರೌಡಿ ನಿಗೃಹ ದಳದ ಅಧಿಕಾರಿ ಅಂಬರೀಷ, ಸೀಮಾ ಆರ್. ಸಮಕ್ಷಮದಲ್ಲಿ ನಡೆದ ದಾಳಿಯಲ್ಲಿ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ಸಂಗ್ರಹಿಸಿಟ್ಟ 12,529 ಬೆಲೆ ಬಾಳುವ ಆಹಾರ ಪುಷ್ಠಿ 187 ವಶಪಡಿಸಿಕೊಳ್ಳಲಾಗಿದೆ.
ಹೀಗೆ ಒಟ್ಟು 23,76,129ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ದ ಕ್ರಮ ಕೈಗೊಂದ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


